ಧಾರವಾಡದ ಸಂಸ್ಕೃತ ಪಾಠಶಾಲೆಯಲ್ಲಿ ರೆಲ್ಲೊ‌ ಫಲಕ ಅನಾವರಣ

ಹೊಸದಿಗಂತ ವರದಿ ಧಾರವಾಡ:

ಗಾಂಧಿಚೌಕನಲ್ಲಿರುವ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಯುವ ಬ್ರಿಗೆಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲಿ ರೆಲ್ಲೊ ಫಲಕ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, 1915ರಲ್ಲಿ ಬಾಲಗಂಗಾಧರ ತಿಲಕರು ಮಾಡಿದ ಸಾರ್ವಜನಿಕ ಭಾಷಣವನ್ನು ಆಲೂರು ವೆಂಕಟರಾಯರು ಇದೇ ಸ್ಥಳದಲ್ಲಿ ಅನುವಾದಿಸಿದ್ದರು. ಹಾಗಾಗಿ ಇದೊಂದು ಐತಿಹಾಸಿಕ ಮಹತ್ವದ ಸ್ಥಳ. ಅದಕ್ಕಾಗಿ ಯುವ ಬ್ರಿಗೇಡ್ ವತಿಯಿಂದ ರೆಲ್ಲೊ ಫಲಕ ಅಳವಡಿಸಲಾಗಿದೆ ಎಂದರು.

ಧಾರವಾಡ ಸಾಹಿತಿಗಳ ತಾಣ. ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಅವರ ಕೊಡುಗೆ ಅಪಾರವಾಗಿದೆ. ತಿಲಕರ ಪ್ರೇರಣೆಯಿಂದ ಅನೇಕ ರಾಷ್ಟ್ರೀಯ ಕಾರ್ಯ, ವಿಚಾರಗಳಿಗೆ ಧಾರವಾಡ ನಾಂದಿಯಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!