ಇದು ಆಟೋನಾ..ಬಸ್ಸಾ..? ಸೆವೆನ್‌ ಸೀಟರ್‌ ಆಟೋದಲ್ಲಿ 27ಮಂದಿ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ಆಟೋದಲ್ಲಿ ಅಬ್ಬಬ್ಬಾ ಅಂದರೆ ಹತ್ತು ಅಥವಾ ಹನ್ನರೆಡು ಜನ ಪ್ರಯಾಣ ಮಾಡಬಹುದು. ಆದರೆ, ಈ ಚಾಲಕನ ಚಾಣಾಕ್ಷತನ ನೋಡ್ರೀ ಯಪ್ಪಾ..ಏಳು ಜನ ಕೂರುವ ಆಟೋದಲ್ಲಿ ಬರೋಬ್ಬರಿ 27ಮಂದಿಯನ್ನು ತುಂಬಿದ್ದಾನೆ. ಉತ್ತರಪ್ರದೇಶದ ಆಟೋ ಚಾಲಕ ತನ್ನ ಏಳು ಆಸನಗಳ ಆಟೋದಲ್ಲಿ 27 ಜನರನ್ನು ಹೊತ್ತೊಯ್ಯುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಒಬ್ಬೊಬ್ಬರನ್ನೇ ಕೆಳಗಿಳಿಸುತ್ತಾ ಲೆಕ್ಕ ಹಾಕಿ ಆಟೋದಲ್ಲಿದ್ದ ಜನರ ಸಂಖ್ಯೆ ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.  ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆಟೋ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಹೊಟ್ಟೆಪಾಡಿಗಾಗಿ ಕೆಲಸ ಮಾಡ್ತಿದಾನೆ ಅಂತ ಒಬ್ಬರು, ಅಪಾಯಕಾರಿ ಪ್ರಯಾಣ ಅಂತ ಮತ್ತೊಬ್ಬರು ಕಮೆಂಟ್‌ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!