ಯುಪಿ ಚುನಾವಣೆ: ಮಧ್ಯರಾತ್ರಿ ಯೋಗಿ-ಕೇಜ್ರಿವಾಲ್ ಟ್ವೀಟ್ ಸಮರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ದಿನಗಳಲ್ಲಿ ಉತ್ತರಪ್ರದೇಶ ಚುನಾವಣೆ ನಡೆಯಲಿದ್ದು, ನಾಯಕರ ನಡುವೆ ಮಾತಿನ ಸಮರ ತಾರಕಕ್ಕೇರುತ್ತಿದೆ. ನಿನ್ನೆ ಮಧ್ಯರಾತ್ರಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಡುವೆ ಟ್ವಿಟರ್ ವಾರ್ ನಡೆದಿದೆ.

ಯೋಗಿ ಆದಿತ್ಯನಾಥ್ ಟ್ವೀಟ್: ಕೇಳು ಕೇಜ್ರಿವಾಲ್, ಇಡೀ ಜನತೆ ಕೊರೋನಾದಿಂದ ನರಳುತ್ತಿದ್ದಾಗ ನೀವು ಯುಪಿ ಕಾರ್ಮಿಕರು ದೆಹಲಿ ತೊರೆಯಬೇಕು ಅಂದಿರಿ. ಮಧ್ಯರಾತ್ರಿಯಲ್ಲಿ ಹೆಂಗಸರು, ಮಕ್ಕಳು ಬೀದಿಯಲ್ಲಿ ಅಸಹಾಯಕತೆಯಿಂದ ನಿಲ್ಲುವಂತೆ ಮಾಡಿದ್ದೀರಿ. ಇದು ನಿಮ್ಮ ಸರ್ಕಾರದ ಅಮಾನವೀಯ ಕೃತ್ಯ. ನೀವು ಮಾನವ ವಿರೋಧಿ ಎಂದಿದ್ದಾರೆ.

 

ಕೇಜ್ರಿವಾಲ್ ಟ್ವೀಟ್: ಕೇಳು ಯೋಗಿ, ಯುಪಿಯ ಜನರ ಮೃತದೇಹಗಳು ನದಿಯಲ್ಲಿ ಹರಿಯುತ್ತಿದ್ದಂತೆಯೇ ಅದನ್ನು ಮುಚ್ಚುವ ಪ್ರಯತ್ನ ಮಾಡಿದ್ದೀರಿ. ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಟೈಮ್ಸ್ ಮ್ಯಾಗಜಿನ್‌ನಲ್ಲಿ ನಿಮ್ಮ ಸುಳ್ಳು ಚಪ್ಪಾಳೆ ಜಾಹೀರಾತು ಕೊಟ್ಟಿದ್ದೀರಿ. ನಿಮ್ಮಂತಹ ಕ್ರೂರಿ ಮತ್ರು ಕ್ರೂರ ಆಡಳಿತಗಾರ ನಾನೆಲ್ಲೂ ಕಂಡಿಲ್ಲ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!