Friday, June 2, 2023

Latest Posts

ಪತ್ನಿಗೆ ಸೊಳ್ಳೆಗಳು ಕಚ್ಚುತ್ತಿರುವುದಾಗಿ ದೂರು ದಾಖಲಿಸಿದ ಪತಿ: ಪೊಲೀಸರು ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನನ್ನ ಹೆಂಡತಿಗೆ ಸೊಳ್ಳೆಗಳು ಕಚ್ಚುತ್ತಿವೆ ಎಂದು ಯುವಕನೊಬ್ಬ ಪೊಲೀಸರಿಗೆ ದೂರು ನೀಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ದೂರು ವಿನೂತನವಾಗಿದ್ದರೆ, ಪೊಲೀಸರು ಪ್ರತಿಕ್ರಿಯಿಸಿದ ರೀತಿ ಇನ್ನೂ ಉತ್ತಮವಾಗಿದೆ. ಸಾಮಾನ್ಯವಾಗಿ ನಮ್ಮ ಮಕ್ಕಳು ಕಾಣುತ್ತಿಲ್ಲ ಎಂದು ದೂರು ನೀಡಿದರೂ ಪೊಲೀಸರು ಅಷ್ಟಾಗಿ ಗಮನ ಹರಿಸುವುದಿಲ್ಲ ‘ನನ್ನ ಹೆಂಡತಿಗೆ ಸೊಳ್ಳೆ ಕಚ್ಚುತ್ತಿದೆ ಸಾರ್’ ಎಂದು ಯುವಕನೊಬ್ಬ ಟ್ವಿಟರ್ ನಲ್ಲಿ ನೀಡಿದ ದೂರಿಗೆ ಯುಪಿ ಪೊಲೀಸರು ಕೂಡ ಮಾನವೀಯವಾಗಿ ಸ್ಪಂದಿಸಿದ್ದಾರೆ. ಯುಪಿಯ ಸಂಭಾಲ್ ಜಿಲ್ಲೆಯ ಪೊಲೀಸರು ದೂರು ನೀಡಿದ ಯುವಕನಿಗೆ ಸೊಳ್ಳೆ ಕಿಲ್ಲರ್ ಬ್ಯಾಟ್‌ ತಂದಿದ್ದಾರೆ.

ಸಂಭಾಲ್ ಜಿಲ್ಲೆಯ ಅಸದ್ ಖಾನ್ ಎಂಬ ಯುವಕನ ಪತ್ನಿ ಕಳೆದ ಭಾನುವಾರ (ಮಾರ್ಚ್ 19, 2023) ರಾತ್ರಿ ಚಂದೌಸಿಯ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆ ಆಸ್ಪತ್ರೆಯಲ್ಲಿ ಸೊಳ್ಳೆಗಳ ಸಮಸ್ಯೆ ವಿಪರೀತವಾಗಿದೆ. ಅಸದ್ ಪತ್ನಿ, ನವಜಾತ ಶಿಶುವಿಗೆ ಸೊಳ್ಳೆ ಕಚ್ಚಿದ್ದರಿಂದ ಅಸದ್ ಆತಂಕಗೊಂಡಿದ್ದರು. ಸೊಳ್ಳೆಗಳಿಂದ ಕಚ್ಚಿದ ಮಗು ಅಳುವುದನ್ನು ಕಂಡು ಅಸದ್ ಬೇಸರಗೊಂಡು ತನ್ನ ಹೆಂಡತಿ ಮತ್ತು ಮಗಳ ಸಂಕಟವನ್ನು ನೋಡಲಾಗದೆ ನನ್ನ ಹೆಂಡತಿ ಮತ್ತು ಮಕ್ಕಳಿಗೆ ಸೊಳ್ಳೆಗಳು ಕಚ್ಚುತ್ತಿವೆ ಸರ್’ ಎಂದು ಯುಪಿ ಪೊಲೀಸರಿಗೆ ಟ್ವೀಟ್ ಮಾಡಿದ್ದಾರೆ. ಅ

ಡಯಲ್ 112 ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ತಕ್ಷಣ ಸ್ಪಂದಿಸಿದ ಪೊಲೀಸರು ಆಸ್ಪತ್ರೆಗೆ ಬಂದು ಅಸದ್ ಖಾನ್ ಗೆ ಸೊಳ್ಳೆ ಸಾಯಿಸುವ ಬ್ಯಾಟ್‌ ನೀಡಿದರು. ಇದಲ್ಲದೆ, ಯುಪಿ ಪೊಲೀಸರು ತಮ್ಮದೇ ಆದ ಶೈಲಿಯಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, “ನಾವು ಮಾಫಿಯಾದಿಂದ ಸೊಳ್ಳೆಯವರೆಗೆ ಏಲ್ಲವನ್ನೂ ಎದುರಿಸುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!