SHOCKING NEWS | ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಯತ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ವಿಷಾದನೀಯ ಘಟನೆ ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ನಡೆದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಹಿಳೆಯ ಹೆಸರು ಪ್ರೀತಿ ಎಂದು ಪೊಲೀಸರು ವಿವರಿಸಿದ್ದಾರೆ. ತನ್ನ ಮಗ ಅಂಶ್ ಪ್ರತಾಪ್ (9) ಮತ್ತು ಅಭಯ್ ಪ್ರತಾಪ್ (5) ಜೊತೆಗೆ ಬಾವಿಗೆ ಹಾರಿದ್ದಾಳೆ. ಆದರೆ, ಈ ವಿಷಯ ತಿಳಿದ ಸ್ಥಳೀಯರು ಅವರನ್ನು ಹೊರತೆಗೆದಿದ್ದು, ಅದಾಗಲೇ ಅಭಯ ಪ್ರತಾಪ್ ಮೃತಪಟ್ಟಿದ್ದಾರೆ.

ನಂತರ ಪ್ರೀತಿ ಹಾಗೂ ಹಿರಿಯ ಮಗ ಅಂಶ್ ಪ್ರತಾಪ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ವಿವರಿಸಲಾಗಿದೆ. ಪ್ರೀತಿ ವಾಸಿಸುತ್ತಿದ್ದ ಪ್ರದೇಶದಲ್ಲಿ ಇತ್ತೀಚೆಗೆ ನೆರೆಹೊರೆಯವರೊಂದಿಗೆ ಜಗಳ ನಡೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಯಾರೋ ಪಾತ್ರೆಗಳನ್ನು ಕದ್ದೊಯ್ದ ಕಾರಣಕ್ಕೆ ಪ್ರೀತಿ ಮತ್ತು ಆಕೆಯ ನೆರೆಹೊರೆಯವರ ನಡುವೆ ಜಗಳ ನಡೆದಿದ್ದು, ನಂತರ ಅದೇ ವಿಷಯಕ್ಕೆ ಆಕೆಯ ಕುಟುಂಬದಲ್ಲಿ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಕಾರಣಗಳಿಂದ ಪ್ರೀತಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!