ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ನಹೀ ಸಹೇಗಾ ರಾಜಸ್ಥಾನ’ ಅಭಿಯಾನವನ್ನು ಪ್ರಾರಂಭಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಿಎಂ ಅಶೋಕ್ ಗೆಹೋಲ್ಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯುಪಿಎ ಅಂದರೆ ‘ಉತ್ಪಿಡನ್-ಪಕ್ಷಪಾತ್-ಅತ್ಯಾಚಾರ್’ (ದಬ್ಬಾಳಿಕೆ-ಪಕ್ಷಪಾತ-ಶೋಷಣೆ). ಎನ್‌ಡಿಎ ಅಂದರೆ ‘ಸಬ್ ಕಾ ಸಾಥ್- ಸಬ್ ಕಾ ವಿಕಾಸ್- ಸಬ್ ಕಾ ವಿಶ್ವಾಸ್’ ಎಂದರ್ಥ ಎಂದು ಹೇಳಿದರು.
ರಾಜಸ್ಥಾನ ಸರ್ಕಾರವು ಜನರನ್ನು ಲೂಟಿ ಮಾಡಿ ಚಿತ್ರಹಿಂಸೆ ನೀಡುತ್ತಿದೆ. ದಲಿತರು, ಆದಿವಾಸಿಗಳು, ಮಹಿಳೆಯರು, ಮಕ್ಕಳು ಮತ್ತು ಬಡವರ ಮೇಲಿನ ದೌರ್ಜನ್ಯದ ಎಲ್ಲ ದಾಖಲೆಗಳನ್ನು ಈ ಸರ್ಕಾರ ಮುರಿದಿದೆ. ಅಧಿಕಾರದಲ್ಲಿರಲು ಪಕ್ಷಕ್ಕೆ ಒಂದು ನಿಮಿಷ ಕೂಡ ಹಕ್ಕಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವುದು ಮತ್ತು ಭ್ರಷ್ಟಾಚಾರದ ದಾಖಲೆಗಳನ್ನು ಮುರಿಯುವುದು ಅಶೋಕ್ ಸರ್ಕಾರದ ಸಾಧನೆ. ತನ್ನ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಪಾಕಿಸ್ತಾನದಿಂದ ಬಂದ ನಿರಾಶ್ರಿತರ ಮನೆಗಳನ್ನು ಬುಲ್ಡೋಜರ್‌ಗಳಿಂದ ಕೆಡವುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.