Friday, March 31, 2023

Latest Posts

ಜಾಗತಿಕವಾಗಿ ಸದ್ದು ಮಾಡತೊಡಗಿದೆ ಯುಪಿಐ: ಸಿಂಗಾಪುರದ ಆನ್‌ಲೈನ್‌ ಪಾವತಿಯೊಂದಿಗೆ ಲಿಂಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಡಿಜಿಟಲ್‌ ಆರ್ಥಿಕತೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ದೇಶೀ ನಿರ್ಮಿತ ಯಶಸ್ವಿ ಪಾವತಿ ವ್ಯವಸ್ಥೆಯಾದ ಯುಪಿಐ (UPI)ಈಗ ಜಾಗತಿಕವಾಗಿ ಸದ್ದು ಮಾಡತೊಡಗಿದೆ. ಅತ್ಯಂತ ವೇಗದ ಪಾವತಿ ವ್ಯವಸ್ಥೆಯಾದ ಯುಪಿಐ ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿತ್ತು. ಇದೀಗ ಭಾರತದ ಗಡಿಯನ್ನು ದಾಟಿ ಅಂತರಾಷ್ಟ್ರೀಯ ಪಾವತಿ ವೇದಿಕೆಯಾಗಿ ಯುಪಿಐ ಹೊರಹೊಮ್ಮಿದೆ.

ಇದೇ ಮೊಟ್ಟ ಮೊದಲ ಬಾರಿಗೆ ಭಾರತ ಮತ್ತು ಸಿಂಗಾಪುರ ದೇಶಗಳ ಜನಪ್ರಿಯ ಪಾವತಿ ವ್ಯವಸ್ಥೆಗಳಾದ UPI ಮತ್ತು PayNow ನಡುವೆ ಸಂಪರ್ಕ ಏರ್ಪಟ್ಟಿದ್ದು ಗಡೆಯಾಚೆಗಿನ ಹಣಕಾಸಿನ ವ್ಯವಹಾರಕ್ಕ ಇವೆರಡೂ ಸಾಕ್ಷಿಯಾಗಲಿವೆ. ಈ ವ್ಯವಸ್ಥೆಯನ್ನು ವರ್ಚುವಲ್‌ ಆಗಿ ಉದ್ಘಾಟಿಸಲಾಗಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಂಗಾಪುರದ ಲೀ ಸಿಯೆನ್ ಲೂಂಗ್ ಈ ವರ್ಚುವಲ್‌ ಸಭೆಯಲ್ಲಿ ಭಾಗವಹಿಸಿದ್ದರು.

RBI ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ (MAS) ವ್ಯವಸ್ಥಾಪಕ ನಿರ್ದೇಶಕ ರವಿ ಮೆನನ್ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಪರಸ್ಪರ ಗಡಿಯಾಚೆಗಿನ ವಹಿವಾಟುಗಳನ್ನು ಮಾಡುವ ಮೂಲಕ ಎರಡು ಪಾವತಿ ವ್ಯವಸ್ಥೆಗಳ ಸಂಪರ್ಕವನ್ನು ಪ್ರಾರಂಭಿಸಿದರು.

UPI ಅಥವಾ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್ಫೇಸ್ ಎಂಬುದು NPCI ಅಭಿವೃದ್ಧಿಪಡಿಸಿದ ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದ್ದು ಅದು ಮೊಬೈಲ್ ಸಾಧನವನ್ನು ಬಳಸಿಕೊಂಡು ಬ್ಯಾಂಕ್ ಖಾತೆಗಳ ನಡುವೆ ಹಣವನ್ನು ತ್ವರಿತವಾಗಿ ವರ್ಗಾಯಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. PayNow ಸಿಂಗಪುರದ ಬಳಕೆದಾರರಿಗಾಗಿ MAS ಅಭಿವೃದ್ಧಿಪಡಿಸಿದ ಇದೇ ರೀತಿಯ ವ್ಯವಸ್ಥೆಯಾಗಿದೆ.

ಈ ಎರಡು ಪಾವತಿ ವ್ಯವಸ್ಥೆಗಳ ಸಂಪರ್ಕವು ಎರಡೂ ದೇಶಗಳ ನಿವಾಸಿಗಳಿಗೆ ಗಡಿಯಾಚೆಗಿನ ಹಣ ರವಾನೆಯಲ್ಲಿ ವೇಗದ ಮತ್ತು ವೆಚ್ಚ-ಪರಿಣಾಮಕಾರಿ ವರ್ಗಾವಣೆಗೆ ಸಹಾಯಕವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!