ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಭಾರತದಾದ್ಯಂತ ಯುಪಿಐ ಸೇವೆಗಳಲ್ಲಿ ಪ್ರಮುಖ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಬಳಕೆದಾರರು ಡಿಜಿಟಲ್ ಪೇಮೆಂಟ್ ನಡೆಸಲು ಪರದಾಡುತ್ತಿದ್ದಾರೆ.
ಅನೇಕ ಬಳಕೆದಾರರು ಪಾವತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಡೌನ್‌ಡೆಕ್ಟರ್ ವರದಿಗಳ ಪ್ರಕಾರ, ಮಧ್ಯಾಹ್ನದ ವೇಳೆಗೆ ಈ ಯುಪಿಐ ಸಮಸ್ಯೆಗಳ ಬಗ್ಗೆ ಸುಮಾರು 1,168 ದೂರುಗಳು ಬಂದಿವೆ.
ಅವುಗಳಲ್ಲಿ, ಗೂಗಲ್ ಪೇ ಬಳಕೆದಾರರು 96 ಸಮಸ್ಯೆಗಳನ್ನು ವರದಿ ಮಾಡಿದ್ದಾರೆ, ಪೇಟಿಎಂ ಬಳಕೆದಾರರು 23 ಸಮಸ್ಯೆಗಳ ಬಗ್ಗೆ ದೂರಿದ್ದಾರೆ. ಯುಪಿಐ ಈ ಸಮಸ್ಯೆಯನ್ನು ಇನ್ನೂ ಪರಿಹರಿಸಿಲ್ಲ. ಕಳೆದ ಕೆಲವು ದಿನಗಳಿಂದ ಯುಪಿಐ ಈ ರೀತಿಯ ಸಮಸ್ಯೆ ಎದುರಿಸುತ್ತಿದೆ.
ಕಳೆದ ಮಾರ್ಚ್ 26 ರಂದು ಕೂಡ ಇದೇರೀತಿ ಯುಪಿಐ ಡೌನ್ ಆಗಿತ್ತು. ಆ ಸಂದರ್ಭ ವಿವಿಧ ಯುಪಿಐ ಅಪ್ಲಿಕೇಶನ್‌ಗಳ ಬಳಕೆದಾರರು ಸುಮಾರು 2 ರಿಂದ 3 ಗಂಟೆಗಳ ಕಾಲ ಇದನ್ನು ಉಪಯೋಗಿಸಲು ಸಾಧ್ಯವಾಗಿರಲಿಲ್ಲ.