ಮಾರಿಷಸ್‌, ಯುಎಇ, ಇಂಡೋನೇಷ್ಯಾ ದೇಶಗಳಿಗೂ ವಿಸ್ತರಿಸಲಿದೆ ಯುಪಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ವಾರವಷ್ಟೇ ಸಿಂಗಪೂರದೊಂದಿಗೆ ನೈಜ ಸಮಯದ ಡಿಜಿಟಲ್‌ ಪಾವತಿಯ ಗಡಿಯಾಚೆಗಿನ ಸಂಪರ್ಕವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ಭಾರತದ ಯುಪಿಐ ಇದೀಗ ಯುಎಇ, ಮಾರಿಷಸ್, ಇಂಡೋನೇಷ್ಯಾ ದೇಶಗಳಿಗೂ ವಿಸ್ತರಿಸಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದವಾರ ಭಾರತದ ದೇಶೀಯ ಆನ್‌ಲೈನ್‌ ಪಾವತಿ ವ್ಯವಸ್ಥೆಯಾದ ಯುಪಿಐ ಹಾಗು ಸಿಂಗಪೂರದ ಪೇ ನೌ ಲಿಂಕ್‌ ಆಗಿದ್ದವು. ಇದು ಭಾರತದ ಯುಪಿಐ ಮೂಲಕವೇ ಸಿಂಗಪೂರದಲ್ಲಿಯೂ ಪಾವತಿ ಮಾಡುವ ಅವಕಾಶನ್ನು ಕಲ್ಪಿಸಿತ್ತು. ಕೇವಲ ಎರಡು ಸೆಕೆಂಡ್‌ ನಲ್ಲಿ ವಿದೇಶಕ್ಕೂ ಹಣ ಕಳಿಸಬಹುದಾದ ವ್ಯವಸ್ಥೆಯನ್ನು ಇದು ಜಾರಿಗೆ ತಂದಿತ್ತು. ಇದೀಗ ಈ ವ್ಯವಸ್ಥೆಯು ಇನ್ನೂ ಇತರ ಮೂರು ಪ್ರಮುಖ ದೇಶಗಳೊಂದಿಗೆ ಏರ್ಪಡಲಿದೆ.

‘ಭಾರತದ ವಿಶ್ವ ದರ್ಜೆಯ UPI ಡಿಜಿಟಲ್ ಪಾವತಿ ಮೂಲಸೌಕರ್ಯವು ಜಾಗತಿಕ ಮಟ್ಟದಲ್ಲಿ ಸಾಗಿದೆ ಮತ್ತು ಭಾರತೀಯ ಬಳಕೆದಾರರಿಗೆ ವಿದೇಶದಲ್ಲಿ ವ್ಯವಹಾರ ನಡೆಸಲು ಸುಲಭವಾಗುತ್ತದೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಸಿಂಗಾಪುರದ ಕ್ರಮದ ಪರಿಣಾಮವಾಗಿ, ಯುಎಇ, ಮಾರಿಷಸ್ ಮತ್ತು ಇಂಡೋನೇಷ್ಯಾದಂತಹ ಇತರ ರಾಷ್ಟ್ರಗಳು ಇದನ್ನು ಅನುಸರಿಸುವ ಸಾಧ್ಯತೆಯಿದೆ, ಇದು ತಡೆರಹಿತ ನೈಜ-ಸಮಯದ ಹಣಕಾಸು ವರ್ಗಾವಣೆಯನ್ನು ಸಕ್ರಿಯಗೊಳಿಸುತ್ತದೆ” ಎಂದು Wibmo – A PayU ದ ಜಾಗತಿಕ ಹೆಡ್ ಮೆಹುಲ್ ಮಿಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!