ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಕೆಳಮನೆ ಮತ್ತು ಮೇಲ್ಮನೆ ಎರಡರಲ್ಲೂ ರಾಜಕೀಯ ಕೋಲಾಹಲ ಭುಗಿಲೆದ್ದಿದ್ದು, ಬಜೆಟ್ ಅಧಿವೇಶನದ ಎರಡನೇ ದಿನದ ಕಲಾಪಕ್ಕೆ ಅಡ್ಡಿಯಾಗಿದೆ.
ಮಹಾಕುಂಭ ಕಾಲ್ತುಳಿತ ಘಟನೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರತಿಪಕ್ಷಗಳ ಸಂಸದರು ಸರ್ಕಾರದ ವಿರುದ್ಧ ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು.
ವಿರೋಧ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, “ಭಾರತದ ಜನರು ನಿಮ್ಮನ್ನು ಸಂಸದರನ್ನಾಗಿ ಆಯ್ಕೆ ಮಾಡಿರುವುದು ಮೇಜುಗಳನ್ನು ಒಡೆದಿದ್ದಕ್ಕಾಗಿ, ಘೋಷಣೆಗಳನ್ನು ಕೂಗುವುದಕ್ಕಾಗಿ ಮತ್ತು ಸದನದ ಕಲಾಪಗಳಿಗೆ ಅಡ್ಡಿಪಡಿಸುವುದಕ್ಕಾಗಿ ಅಲ್ಲ, ಚರ್ಚೆ ನಡೆಸಲು” ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ರಾಜ್ಯಸಭೆಯಲ್ಲಿ 2ನೇ ದಿನದ ಕಲಾಪವೂ ಆರಂಭವಾಗಿದೆ. ಕಲಾಪದ ವೇಳೆ ಮಹಾಕುಂಭ ಕಾಲ್ತುಳಿತ ಘಟನೆಯ ವಿಷಯವಾಗಿ ಇಡೀ ವಿರೋಧ ಪಕ್ಷದ ಸಂಸದರು ರಾಜ್ಯಸಭೆಯಿಂದ ಹೊರನಡೆದರು.