ಹೊಸದಿಗಂತ ವರದಿ ಅಂಕೋಲ:
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಕೇಂದ್ರ ಕಚೇರಿಯಲ್ಲಿ ಆರ್‌ಟಿಜಿಎಸ್ ಮೂಲಕ ಬೇರೆಯವರ ಖಾತೆ ದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಶಾಖೆಯ ಅಕೌಂಟ್ ಹ್ಯಾಕ್ ಮಾಡುವ ಮೂಲಕ 33,42,845 ಲಕ್ಷ ಹಣವನ್ನು ವಂಚಿಸಿ ಕದ್ದಿದ್ದಾರೆ.
ಈ ಕುರಿತು ಕಾರವಾರದಲ್ಲಿ ಸೈಬರ್ ಕ್ರೈ ವಿಭಾಗದ ಠಾಣೆ (CN) ಯಲ್ಲಿ ಅಂಕೋಲ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ರವೀಂದ್ರ ಪಾಂಡುರಂಗ ವೈದ್ಯ ದೂರು ನೀಡಿದ್ದಾರೆ.
ಅಂಕೋಲ ಕೇಂದ್ರ ಕಚೇರಿಯಲ್ಲಿ ಖಾತೆದಾರರಾದ ಮೀನಾಕ್ಷಿ ಕೃಷ್ಣಗೌಡ ರಿಂದ ವ್ಯವಸಾಯ ಸೇವಾ ಸಹಕಾರಿ ಸಂಘ ಕ್ಕೆ RTGS ಮಾಡಿದ 5,ಲಕ್ಷ ,MS ಮೆಂಕಟೇಶ್ವರ ಗ್ಯಾಸ್ ಸೆಂಟರ್ ನಿಂದ ಮೆಂಕಟೇಶ್ವರ ಗ್ಯಾಸ್ ಸೆಂಟರ್ ಗೆ RTGS ಮಾಡಿದ 5,46,000 ಲಕ್ಷ , ಜೊತೆಗೆ ಇವರದೇ ಮತ್ತೊಂದು ಖಾತೆಗೆ RTGS ಮಾಡಿದ 6,60,000 ಲಕ್ಷ , ಸವಿತಾ ವೆಂಕಟರಮಣ ನಾಯ್ಕ ರಿಂದ TAFE ACCESS LTD ಗೆ RTGS ಮಾಡಿದ 16,36,895 ಲಕ್ಷ ಸೇರಿ ಒಟ್ಟು 33,42,895 ಲಕ್ಷ ಹಣವು RTGS ಮಾಡಿದ ಖಾತೆಗೆ ಹೋಗದೇ ಹ್ಯಾಕ್ ಆಗಿದ್ದು ಸೈಬರ್ ಕಳ್ಳರ ಖಾತೆಗೆ ಜಮ ಆಗಿದೆ ಎಂದು ದೂರು ನೀಡಲಾಗಿದೆ.
ಇನ್ನು ಯಾರಖಾತೆಗೆ ಜಮ ಆಗಿದೆ ಎಂದು ಈವರೆಗೂ ಮಾಹಿತಿ ತಿಳಿದಿಲ್ಲ. ಜೊತೆಗೆ ಜನವರಿ 24 ರಿಂದ 27 ರ ನಡುವೆ ಘಟನೆ ನಡೆದಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.