May 3, 2026
Sunday, May 3, 2026
spot_img

ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಕಿರಿಕ್: ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರೋಗ್ಯ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ಉರ್ದು ಭಾಷೆ ಬಳಕೆಯಾಗಿರುವ ಕುರಿತು ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಆರೋಗ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಉರ್ದು ಭಾಷೆ ಬಳಸಲಾದ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನಂತರ ಪ್ರತಿಕ್ರಿಯಿಸುತ್ತೇನೆ,” ಎಂದು ತಿಳಿಸಿದರು.

ಭಾಷಾ ಅಭಿಮಾನದ ಬಗ್ಗೆ ಮಾತನಾಡಿದ ಅವರು, “ನಮ್ಮ ಮಣ್ಣಿನ ಭಾಷೆ ಮತ್ತು ತಾಯಿ ಭಾಷೆಯಾದ ಕನ್ನಡಕ್ಕೆ ನಮ್ಮಲ್ಲಿ ಸದಾ ಮೊದಲ ಆದ್ಯತೆ. ಬೇರೆ ಭಾಷೆಗಳು ಕೇವಲ ಬದುಕು ಕಟ್ಟಿಕೊಳ್ಳಲು ಅಥವಾ ಹೊಟ್ಟೆ ತುಂಬಿಸಿಕೊಳ್ಳಲು ಸಹಕಾರಿ. ಆದರೆ, ಕನ್ನಡ ಮಾತ್ರ ನಮ್ಮ ಭಾವನೆಗಳೊಂದಿಗೆ ಬೆರೆತಿರುವ ಭಾಷೆ,” ಎಂದು ಭಾವುಕರಾಗಿ ನುಡಿದರು.

ಒಂದು ವೇಳೆ ಕನ್ನಡವನ್ನು ಕಡೆಗಣಿಸಿ ಬೇರೆ ಭಾಷೆಗೆ ಪ್ರಾಮುಖ್ಯತೆ ನೀಡಿದ್ದು ನಿಜವೇ ಆಗಿದ್ದಲ್ಲಿ, ಅಂತಹ ನಡೆಯನ್ನು ತಾವು ಸಹಿಸುವುದಿಲ್ಲ ಎಂದು ಹೇಳಿದ ಅವರು, “ಒಂದು ವೇಳೆ ಅಂತಹ ಘಟನೆ ನಡೆದಿದ್ದರೆ, ನಾನು ನಾಳೆಯೇ ಬಂದು ಅದನ್ನು ಬಹಿರಂಗವಾಗಿ ಖಂಡಿಸುತ್ತೇನೆ,” ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !