ಬಾಲಕರ ವಿರುದ್ಧ ದೂರು ನೀಡೋಕೆ ಮುಂದಾದ ಉರ್ಫಿ: ಇವರು ಮಾಡಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಉರ್ಫಿ ಜಾವೇದ್ ಹೆಚ್ಚು ಸುದ್ದಿಯಾಗೋದು ತಮ್ಮ ಚಿತ್ರವಿಚಿತ್ರ ಬಟ್ಟೆಗಳ ಕಾರಣದಿಂದ. ಇದೀಗ 10 ಬಾಲಕರು ಕರೆ ಮಾಡಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ದೂರು ನೀಡಲು ಉರ್ಫಿ ಮುಂದಾಗಿದ್ದಾರೆ.

10 ಬಾಲಕರು ಪದೇ ಪದೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಇವರೆಲ್ಲಾ ಯಾರು? ಇವರಿಗೆ ಏನು ಬೇಕು? ಇವರಿಗೆ ನನ್ನ ನಂಬರ್ ಹೇಗೆ ಸಿಕ್ತು ಈ ಎಲ್ಲದಕ್ಕೂ ಉತ್ತರ ಬೇಕಿದೆ. ಹಾಗಾಗಿ ಪೊಲೀಸರಿಗೆ ದೂರು ನೀಡ್ತೇನೆ ಎಂದು ಉರ್ಫಿ ಹೇಳಿದ್ದಾರೆ. ಇನ್ನು ಈ ಬಾಲಕರ ಪೋಷಕರು ಯಾರು ಎಂದು ಯಾರಿಗಾದರೂ ತಿಳಿದಿದ್ದರೆ ನನಗೆ ಹೇಳಿ, ಹೇಳಿದವರಿಗೆ ಸೂಕ್ತ ಬಹುಮಾನ ಕೂಡ ನೀಡುತ್ತೇನೆ ಎಂದು ಉರ್ಫಿ ಹೇಳಿದ್ದಾರೆ.

ಮುಂದಿನ ಪೀಳಿಗೆ ಈ ರೀತಿ ಕೆಟ್ಟು ಹೋದ್ರೆ ಹೇಗೆ? ಈ ಮಕ್ಕಳಿಗೆಲ್ಲಾ ಈ ರೀತಿ ಮಾಡುವಂತೆ ತಲೆ ತುಂಬಿದ್ದು ಯಾರು ಎನ್ನುವ ಪ್ರಶ್ನೆಯನ್ನು ಉರ್ಫಿ ಇಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!