ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಮೇಲೆ ಚಿತ್ರ ವಿಚಿತ್ರ ಬಟ್ಟೆ ಹಾಕೋದಿಲ್ಲ, ನನ್ನ ಸ್ಟೈಲ್ ಬದಲಾಯಿಸ್ತೇನೆ ಎಂದ ಉರ್ಫಿ ಜಾವೇದ್ ಇದೀಗ ಮತ್ತದೇ ಹಳೆ ಟ್ರೆಂಡ್‌ನ್ನು ಫಾಲೋ ಮಾಡಿದ್ದಾರೆ. ಮಲ್ಲಿಗೆ ಹೂವನ್ನು ತಲೆಗೆ ಮುಡಿದುಕೊಳ್ಳೋದು ಗೊತ್ತೇ ಇದೆ, ಆದ್ರೆ ಉರ್ಫಿ ಮಲ್ಲಿಗೆಯನ್ನೇ ಬಟ್ಟೆ ಮಾಡ್ಕೊಂಡಿದ್ದಾರೆ.
ಎದೆಭಾಗವನ್ನು ಕೈಯಲ್ಲಿ ಕವರ್ ಮಾಡಿಕೊಂಡು, ಕೈಗೆ ಕೆಂಪು ಮೆಹೆಂದಿ ಹಾಕಿದ್ದಾರೆ, ಉದ್ದದ ಕೂದಲಿಗೆ ಮಲ್ಲಿಗೆ ಮುಡಿದಿದ್ದು, ಮಲ್ಲಿಗೆಯ ಲಂಗವನ್ನೇ ಮಾಡಿ ಹಾಕಿಕೊಂಡಿದ್ದಾರೆ. ಇದಕ್ಕೆ ಮಿಶ್ರ ಕಮೆಂಟ್ಸ್ ಬಂದಿದ್ದು, ಉರ್ಫಿ ಯಾವ ಬಟ್ಟೆ ಹಾಕಿದ್ರೂ ಕಾನ್ಫಿಡೆನ್ಸ್‌ನಿಂದ ಕೊಲ್ತಾರೆ ಎಂದಿದ್ದಾರೆ, ಇನ್ನು ಹಲವರು ಹೂವುಗಳ ಮೇಲೆ ಆಸಕ್ತಿಯೇ ಹೋಯ್ತು, ಇನ್ನೆಷ್ಟು ವಿಚಿತ್ರ ನೋಡಬೇಕು ಅಂತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.