ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕಳೆದ ಹಲವು ದಿನಗಳಿಂದ ಟೊಮೆಟೊ ಕುರಿತ ಚರ್ಚೆ ಜೋರಾಗುತ್ತಿದೆ. ಎಲ್ಲಿ ಹೋದರೂ ಈಗ ಟೊಮೆಟೊ ಕುರಿತ ಮಿಮ್ಸ್ , ಟೊಮೆಟೊ ಗಾಗಿ ಮನೆಯಲ್ಲಿ ಜಗಳ ಈ ರೀತಿಯ ಚರ್ಚೆಗಳು ನಡೆಯುತ್ತಿರುತ್ತದೆ.
ಇದೀಗ ನಾನು ಯಾವುದಕ್ಕೂ ಕಮ್ಮಿ ಎಂದು ನಟಿ ಉರ್ಫಿ ಜಾವೇದ್ (Uorfi Javed) ಕೂಡ ಎಂಟ್ರಿ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಉರ್ಫಿ,ಇದೀಗ ಮಾರುಕಟ್ಟೆಯಲ್ಲಿ ಅತ್ಯಂತ ಬೆಲೆ ಬಾಳುವ ತರಕಾರಿಯನ್ನೇ ತಮ್ಮ ಕಿವಿಯ ಓಲೆ ಮಾಡಿಕೊಂಡಿದ್ದಾರೆ.
ಹೌದು ಉರ್ಫಿ ಟೊಮೆಟೊ ಹಣ್ಣನ್ನೇ ತಮ್ಮ ಕಿವಿಯ ಓಲೆ ಮಾಡಿಕೊಂಡಿದ್ದಾರೆ. ಅದಲ್ಲದೆ ಟೊಮೆಟೊ ಹಿಡಿದು ಕ್ಯಾಮೆರಾಕ್ಕೆ ಫೋಸ್ ಕೊಟ್ಟಿದ್ದಾರೆ.
ಟೊಮೆಟೊ ಅನ್ನು ತಿನ್ನುವ ವಿಡಿಯೊವನ್ನೂ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ಆರ್ ಮಾಧವನ್ ಅವರು ಟೊಮೆಟೊ ಬೆಲೆ ಹೆಚ್ಚಾಗಿರುವುದರಿಂದ ಕಡಿಮೆ ಟೊಮೆಟೊ ತಿನ್ನುತ್ತಿದ್ದೇನೆ ಎಂದಿದ್ದ ಫೋಟೋ ಮತ್ತು ಮಹಾರಾಷ್ಟ್ರದ ರೈತನೊಬ್ಬ ಟೊಮೆಟೊ ಮಾರಿ ಒಂದೇ ತಿಂಗಳಲ್ಲಿ ಕೋಟ್ಯಧಿಪತಿಯಾದ ಸುದ್ದಿಯ ಫೋಟೋವನ್ನೂ ನಟಿ ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ಗೆ ಉರ್ಫಿ ‘ಟೊಮೆಟೋಗಳು ಹೊಸ ಬಂಗಾರ’ ಎಂದು ಬರೆದುಕೊಂಡಿದ್ದಾರೆ. ಉರ್ಫಿ ಈ ಪೋಸ್ಟ್ ಬಗ್ಗೆ ನೆಟ್ಟಿಗರು ನಾನಾ ಕಾಮೆಂಟ್ ಮಾಡಲು ಶುರುಮಾಡಿದ್ದಾರೆ.