ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಚಿತ್ರ ಬಟ್ಟೆಗಳಿಂದಲೇ ಫೇಮಸ್ ಆಗಿರೋ ಉರ್ಫಿ ಜಾವೇದ್ ಅರೆಸ್ಟ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದೀಗ ಆ ವಿಡಿಯೋ ಫೇಕ್ ಎಂದು ತಿಳಿದುಬಂದಿದೆ.
ಹೌದು, ಉರ್ಫಿ ಪಬ್ಲಿಸಿಟಿಗಾಗಿ ವಿಡಿಯೋ ಮಾಡಿದ್ದು, ಮುಂಬೈ ಪೊಲೀಸರು ಇದು ಚೀಪ್ ಪಬ್ಲಿಸಿಟಿಗಾಗಿ ಮಾಡಿದ ವಿಡಿಯೋ ಎಂದು ಹೇಳಿದ್ದಾರೆ.
ಮುಂಬೈ ಪೊಲೀಸರ ಸಮವಸ್ತ್ರ ಹಾಗೂ ಪೊಲೀಸ್ ಚಿಹ್ನೆಯನ್ನು ದುರ್ಬಳಕೆ ಮಾಡಿದ ಕಾರಣ ಕಾನೂನು ಉಲ್ಲಂಘನೆಯಾಗಿದೆ, ವಿಡಿಯೋದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಕಲಿ ಪೊಲೀಸ್ ಹಾಗೂ ವಿಡಿಯೋಗೆ ಬಳಸಿದ್ದ ವಾಹನವನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಡಿಯೋದಲ್ಲೇನಿತ್ತು?
ಉರ್ಫಿ ಹೊಟೇಲ್‌ನಿಂದ ಹೊರಬರುತ್ತಿದ್ದಂತೆಯೇ ಇಬ್ಬರು ಮಹಿಳಾ ಪೊಲೀಸರು ಬಂದು, ಈ ರೀತಿ ಬಟ್ಟೆ ಹಾಕುವಂತಿಲ್ಲ ಎನ್ನುತ್ತಾರೆ. ಅದಕ್ಕೆ ಉರ್ಫಿ ನನ್ನ ಬಟ್ಟೆ ನನ್ನಿಷ್ಟ ಎಂದು ಹೇಳುತ್ತಾರೆ. ಹೆಚ್ಚಿಗೆ ಮಾತನಾಡಬೇಡಿ, ಸ್ಟೇಷನ್‌ಗೆ ನಡೆಯಿರಿ ಎಂದು ಪೊಲೀಸ್ ಸಿಬ್ಬಂದಿ ಉರ್ಫಿ ಕೈ ಹಿಡಿದು ಎಳೆದು ವ್ಯಾನ್‌ನಲ್ಲಿ ಕೂರಿಸುತ್ತಾರೆ.