ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ಏರ್ ಇಂಡಿಯಾಗೆ 10 ಲಕ್ಷ ರೂ. ದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿ ಏರ್ ಇಂಡಿಯಾಗೆ ಡಿಜಿಸಿಎ 10 ಲಕ್ಷ ರೂ. ದಂಡ ವಿಧಿಸಿದೆ.

ಈ ಘಟನೆಯನ್ನು ಡಿಜಿಸಿಎ ಗಮನಕ್ಕೆ ತಂದು ರಿಪೋರ್ಟ್​ ಮಾಡಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಲಾಗಿದೆ.

ಡಿಸೆಂಬರ್ 6 ರಂದು ಏರ್​ ಇಂಡಿಯಾದಲ್ಲಿ ಪ್ರಯಾಣಿಕರೊಬ್ಬರು ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.
ಭಾರತೀಯ ವಾಯುಯಾನ ವಾಚ್‌ಡಾಗ್ ಆಗಿರುವ ಡಿಜಿಸಿಎ ಏರ್ ಇಂಡಿಯಾ ಮೂತ್ರ ವಿಸರ್ಜನೆಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈಗ ಇಂತಹ ಘಟನೆಗಳು ಜರುಗಂತೆ ನೋಡಿಕೊಳ್ಳಲು ಅದು ವಿಮಾನಯಾನ ಸಂಸ್ಥೆಗಳಿಗೆ ಸಲಹೆಯನ್ನು ನೀಡಿದೆ.

ಈ ಕುರಿತಾಗಿ ಪ್ರಕಟಣೆ ಹೊರಡಿಸಿರುವ ಡಿಜಿಸಿಎ, ಇತ್ತೀಚೆಗೆ, ವಿಮಾನದ ಸಮಯದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು ಅಶಿಸ್ತಿನ ವರ್ತನೆ ಮತ್ತು ಅನುಚಿತ ವರ್ತನೆಯ ಕೆಲವು ಘಟನೆಗಳನ್ನು ಡಿಜಿಸಿಎ ಗಮನಿಸಿದೆ, ಇದರಲ್ಲಿ ಪೋಸ್ಟ್ ಹೋಲ್ಡರ್‌ಗಳು, ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಸದಸ್ಯರು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!