ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ ಬೆನ್ನಲ್ಲೇ ಇದೀಗ ರೈಲಿನಲ್ಲೂ ಮೂತ್ರ ವಿಸರ್ಜನೆ ಪ್ರಕರಣ ದಾಖಲಾಗಿದೆ.
ಅಮೃತ್‌ಸರ್ ಮತ್ತು ಕೋಲ್ಕತ್ತಾ ನಡುವಿನ ಅಕಲ್ ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ರೈಲಿನಲ್ಲಿ ನಿಯೋಜನೆಗೊಂಡಿದ್ದ ಬಿಹಾರದ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ.
ಮುನ್ನಾ ಕುಮಾರ್ ಮಹಿಳೆ ಮೇಲೆ ರಾತ್ರಿ ಮೂತ್ರ ವಿಸರ್ಜನೆ ಮಾಡಿದ್ದು, ಮಹಿಳೆ ಕೂಗಿದ್ದಾಳೆ, ನಂತರ ಮುನ್ನಾ ಓಡಿ ಹೋಗಲು ಯತ್ನಿಸಿದ್ದು, ಮಹಿಳೆಯ ಪತಿ ಆತನನ್ನು ಹಿಡಿದಿದ್ದಾರೆ. ಇತರರು ಟಿಟಿಇಯನ್ನು ಥಳಿಸಿದ್ದು, ಸರ್ಕಾರಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.