ʼನನ್ನ ಹೃದಯವನ್ನು ಹಿಂಬಾಲಿಸುತ್ತಿದ್ದೇನೆʼ ಎಂದು ಆಸ್ಟೇಲಿಯಾಕ್ಕೆ ಹೊರಟ ಊರ್ವಶಿ! ಪಂತ್‌ ಕಾಲೆಳೆದ ಅಭಿಮಾನಿಗಳು..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಪರಿಮಿತ ಸೌಂದರ್ಯದ ಕಣಿ, ಬಾಲಿವುಡ್ ನಟಿ ಊರ್ವಶಿ ರೌಟೇಲಾ “ನಾನು ನನ್ನ ಹೃದಯವನ್ನು ಹಿಂಬಾಲಿಸಿ ಆಸ್ಟ್ರೇಲಿಯಾಕ್ಕೆ ಹೊರಟಿದ್ದೇನೆ” ಎಂದು ಬರೆದು ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ. ಈ ಫೋಸ್ಟ್‌ ವೈರಲ್‌ ಆಗುತ್ತಲೇ ನೆಟ್ಟಿಗರ ಜೋಶ್‌ ಹೆಚ್ಚಿಸಿದ್ದು ಟೀಂ ಇಂಡಿಯಾ ಬ್ಯಾಟ್ಸ್‌ಮನ್ ರಿಶಭ್‌ ಪಂತ್‌ ಭರ್ಜರಿಯಾಗಿ ಟ್ರೋಲ್‌ ಆಗುತ್ತಿದ್ದಾರೆ!.
ಊರ್ವಶಿ-‌  ಪಂತ್ ಕದ್ದುಮುಚ್ಚಿ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಸುದ್ದಿಗಳು ಹಬ್ಬಿದ್ದವು. ಈ ಜೋಡಿ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು ಗಾಸಿಪ್‌ಗೆ ಬಲ ತುಂಬಿತ್ತು. ಕೆಲ ದಿನಗಳ ಹಿಂದೆ ಊರ್ವಶಿ ಸಂದರ್ಶವೊಂದರಲ್ಲಿ ಮಾತಿನ ಭರದಲ್ಲಿ ಆರ್‌ಪಿ (ರಿಶಭ್‌ ಪಂತ್)‌ ಎಂಬ ಕ್ರಿಕೆಟಿಗ ತನಗಾಗಿ ಹೋಟೆಲ್‌ ನಲ್ಲಿ 17 ಗಂಟೆಗಳ ಕಾಲ ಕಾದುಕುಳಿತಿದ್ದ ಎಂದು ಹೇಳಿ ಬಿಲ್ಡಪ್‌ ಪಡೆಯಲು ಯತ್ನಿಸಿದ್ದರು. ಈ ಹೇಳಿಕೆ ರಿಷಭ್‌ ಪಂತ್‌ ಗೆ ಕೋಪ ತರಿಸಿತ್ತು. ಸುಳ್ಳು ಹೇಳುವುದನ್ನು ನಿಲ್ಲಿಸು ʼಸಹೋದರಿʼ ಎಂದು ಪಂತ್‌ ತಿರುಗೇಟು ನೀಡಿದ್ದು ಸಾಮಾಜಿಕ ತಾಣಗಳಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಈದಕ್ಕೆ ಟಾಂಗ್‌ ನೀಡಿದ್ದ ಊರ್ವಶಿ ಕ್ರಿಕೆಟ್‌ ಬಗ್ಗೆ ಗಮನಹರಿಸು ಸಹೋದರ ಎಂದು ಮರಳಿ ಟಾಂಗ್‌ ನೀಡಿದ್ದರು. ಸಾಮಾಜಿಕ ತಾಣಗಳಲ್ಲಿ ಇವರಿಬ್ಬರ ಕಿತ್ತಾಟ ಅಭಿಮಾನಿಗಳಿಗೆ ಭರ್ಜರಿ ರಂಜನೆ ನೀಡಿತ್ತು.
ಕೆಲ ದಿನಗಳ ಬಳಿಕ ಊರ್ವಶಿ ಮೆತ್ತಗಾದಂತೆ ತೋರುತ್ತಿದ್ದು, ಅ.4 ರಂದು  ಊರ್ವಶಿ ಪಂತ್‌ ಗೆ ಬರ್ತ್‌ ಡೇ ಶುಭಾಶಯ ಕೋರಿದ್ದು ಮತ್ತೆ ಸಾಮಾಜಿಕ ತಾಣಗಳಲ್ಲಿ ಮತ್ತೆ ಸದ್ದು ಮಾಡಿತ್ತು. ಆ ಬಳಿಕ ಮತ್ತೊಂದು ಹಂತಕ್ಕೆ ಮುಂದುವರೆದ ಎರಡು ಬಾರಿ ಮಿಸ್ ಯೂನಿವರ್ಸ್ ಇಂಡಿಯಾ ಊರ್ವಶಿ,  “ನನ್ನನ್ನು ಕ್ಷಮಿಸು” ಎಂದು ತನ್ನ ಕೈಗಳನ್ನು ಮಡಚುವ ಮೂಲಕ ಪಂತ್‌ ರ ಬಳಿ ಕ್ಷಮೆಯಾಚಿಸಿದ್ದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.
ಜೊತೆಗೆ ರಿಷಬ್ ನಿಮ್ಮ ಬಾಯ್‌ಫ್ರೆಂಡಾ ಎಂದು ಕೇಳಿದಾಗ, ನಟಿ ಮುಗುಳ್ನಕ್ಕು, “ನೋ ಕಾಮೆಂಟ್ಸ್” ಎಂದು ನಾಚಿದ್ದರು.
ಇದೀಗ ಊರ್ವಶಿ ತಾನು ಆಸ್ಟ್ರೇಲಿಯಾ ಫ್ಲೈಟ್‌ ಹತ್ತಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್‌ ಹಂಚಿಕೊಂಡು “ನನ್ನ ಹೃದಯದ ಬಯಕೆಯಂತೆ ಪ್ರೀತಿಯನ್ನು ಅರಸಿ ಹೊರಟಿದ್ದೇನೆ” ಎಂದು ಬರೆದುಕೊಂಡಿರುವುದು ನಟ್ಟಿಗರಿಗೆ ಆಹಾರವಾಗಿದೆ.

 

ಈ ಬಗ್ಗೆ ಬಗೆ ಬಗೆಯಾಗಿ ಕಾಮೆಂಟ್‌ ಮಾಡುತಿರುವ ನೇಟಿಜನ್‌ಗಳು, ʼಊರ್ವಶಿ ರಿಷಭ್‌ನನ್ನು ಫಾಲೋ ಮಾಡುತ್ತಿದ್ದಾಳೆʼ ಎಂದು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. “ರಿಷಭ್ ಅನ್ನು ಅನುಸರಿಸುವುದನ್ನು ನಿಲ್ಲಿಸಿ!” ಎಂದು ಒಬ್ಬ ನೆಟ್ಟಿಗ ಬರೆದಿದ್ದರೆ,  “ಅವಳು ರಿಷಭ್‌ನನ್ನು ಬಿಟ್ಟು ಹೋಗುವುದಿಲ್ಲʼ ಎಂದು ಮತ್ತೊಬ್ಬರು ಹೇಳಿದ್ದಾರೆ. ಮೂರನೇ ಬಳಕೆದಾರರು, “ನೀವು ನಿಜವಾಗಿಯೂ ಆಸ್ಟ್ರೇಲಿಯಾಕ್ಕೆ ರಿಷಬ್ ಅವರನ್ನು ಹುಡುಕಿ ಹೊರಟಿದ್ದೀರಾ? ” ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!