ಫಿಲಿಡೆಲ್ಫಿಯಾ ಬಾರ್‌ನಲ್ಲಿ ಗುಂಡಿನ ದಾಳಿ: 12 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫಿಲಡೆಲ್ಫಿಯಾದ ಕೆನ್ಸಿಂಗ್ಟನ್ ವಿಭಾಗದ ಬಾರ್‌ನ ಹೊರಗೆ ಶನಿವಾರ ತಡರಾತ್ರಿ (ಸ್ಥಳೀಯ ಕಾಲಮಾನ) ಕನಿಷ್ಠ 12 ಜನರ ಮೇಲೆ ಗುಂಡು ಹಾರಿಸಲಾಗಿದೆ. ಮೂಲಗಳ ಪ್ರಕಾರ, ಇದು ಪೂರ್ವ ಅಲೆಘೆನಿ ಮತ್ತು ಕೆನ್ಸಿಂಗ್ಟನ್ ಅವೆನ್ಯೂಸ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ ಎಂದು ಫಿಲಡೆಲ್ಫಿಯಾ ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

12 ಜನರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿಗೆ ನಿಖರ ಕಾರಣವೇನು ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯುಎಸ್ ಶಸ್ತ್ರಾಸ್ತ್ರ ಖರೀದಿಸುವ ಅಥವಾ ಹೊಂದುವವರ ಬಗ್ಗೆ ನಿರ್ಬಂಧ ವಿಧಿಸದ ಹೊರತು ಇಂತಹ ಅನಾಹುತ ತಪ್ಪಿದ್ದಲ್ಲ ಎಂದು ಹೇಳಿದೆ. ಅಮೇರಿಕನ್ ಕಾನೂನುಗಳು ಈ ವಿಷಯದಲ್ಲಿ ತುಂಬಾ ಸಡಿಲವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!