ಶತ್ರುಗಳ ಎದೆಯಲ್ಲಿ ಢವಢವ: ಅತ್ಯಾಧುನಿಕ B-21 ಬಾಂಬರ್ ಅನಾವರಣಗೊಳಿಸಿದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಗತ್ತಿನಲ್ಲಿ ಈವರೆಗೆ ಇರುವ ಸೇನಾ ಅಸ್ತ್ರಗಳು ಒಂದು ಕಡೆಯಾದರೆ, ಈ ಅಸ್ತ್ರವೊಂದೇ ಇನ್ನೊಂದು ಕಡೆ. ಚೀನಾ ಮತ್ತು ರಷ್ಯಾ ಸೇರಿದಂತೆ ಇತರೆ ದೇಶಗಳ ಎದೆಯಲ್ಲಿ ಢವಢವ ಉಂಟು ಮಾಡಲು ಯುನೈಟೆಡ್ ಸ್ಟೇಟ್ಸ್ ಅತ್ಯಾಧುನಿಕ ಮಿಲಿಟರಿ ವಿಮಾನವನ್ನು ಅನಾವರಣಗೊಳಿಸಿದೆ. ಇದರ ಹೆಸರು ಬಿ 21-ರೈಡರ್. ಅಮೆರಿಕದ ಇತಿಹಾಸದಲ್ಲಿ ಇಲ್ಲಿಯವರೆಗೆ ಆ ದೇಶವು ಅಭಿವೃದ್ಧಿಪಡಿಸಿದ ಎಲ್ಲಾ ಬಾಂಬರ್‌ಗಳಿಗಿಂತ ಇದು ಹೆಚ್ಚು ಸುಧಾರಿತ. ವಿಮಾನಗಳಿಗಿಂತ ಹೆಚ್ಚು ಶಕ್ತಿಶಾಲಿ. B-21 ರೈಡರ್ ಅನ್ನು ಕ್ಯಾಲಿಫೋರ್ನಿಯಾದ ವಾಯುನೆಲೆಯಲ್ಲಿ ಅನಾವರಣಗೊಳಿಸಲಾಯಿತು.

B-21 ರೈಡರ್ ಇತರ ದೇಶಗಳ ರೈಡಾರ್ ವ್ಯವಸ್ಥೆಗಳನ್ನು ಕುರುಡಾಗಿಸಿ ಹದ್ದಿನಂತೆ ಹಾರುತ್ತದೆ. ಶತ್ರು ರಾಷ್ಟ್ರಗಳ ರೈಡಾರ್ಗಳು ತಮ್ಮ ಹಿಡಿತಕ್ಕೆ ಬಂದಿರುವುದು ಗೊತ್ತಾಗುವ ಮುನ್ನವೇ ಬಿ-21 ರೈಡರ್ ಆ ದೇಶದ ಮೇಲೆ ಅಣ್ವಸ್ತ್ರ ದಾಳಿ ನಡೆಸಿ ಹೊರಟು ಹೋಗುತ್ತದೆ. ಇಲ್ಲಿಯವರೆಗೆ ಅಮೆರಿಕ ಬಿ2 ಸ್ಪಿರಿಟ್ ಬಾಂಬರ್‌ಗಳನ್ನು ಬಳಸುತ್ತಿತ್ತು. ಇವುಗಳಿಗೆ ಹೋಲಿಸಿದರೆ, B-21 ರೈಡರ್ ಬಾಂಬರ್ ಸುಧಾರಿತವಾಗಿದೆ. ಅಮೆರಿಕ ಪ್ರಸ್ತುತ ಆರು B-21 ರೈಡರ್ ನ್ಯೂಕ್ಲಿಯರ್ ಸ್ಟೆಲ್ತ್ ಬಾಂಬರ್‌ಗಳನ್ನು ಸಿದ್ಧಪಡಿಸುತ್ತಿದೆ. ಬಿ-21 ರೈಡರ್ ಪ್ರತಿ ವಿಮಾನವನ್ನು ತಯಾರಿಸಲು 6132 ಕೋಟಿ ರೂ.ಖರ್ಚಾಗಿದೆ. ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಯುಎಸ್ ಈ ಮಟ್ಟದ ರಹಸ್ಯ ರೈಡಾರ್ ಅನ್ನು ನಿಯೋಜಿಸಿದೆ.

B-21 ರೈಡರ್ US ಏರ್ ಫೋರ್ಸ್‌ನ ಸಂಪೂರ್ಣ ಬಾಂಬರ್ ಫ್ಲೀಟ್‌ಗೆ ಮಾರ್ಗದರ್ಶನ ನೀಡುತ್ತದೆ. ಮಾಹಿತಿಯನ್ನು ಸಂಗ್ರಹಿಸುವುದು, ಅದನ್ನು ವಿಶ್ಲೇಷಿಸುವುದು, ಮಾಹಿತಿಯನ್ನು ಕಳುಹಿಸುವುದು, ಎಲ್ಲಿ ಬೇಕಾದರೂ ದಾಳಿ ಮಾಡುವುದು.. ಈ ಎಲ್ಲಾ ಕಾರ್ಯಗಳನ್ನು B-21 ಯಾವುದೇ ತಪ್ಪಿಲ್ಲದೆ ನಡೆಸುತ್ತದೆ. ಮತ್ತೊಂದೆಡೆ, ಚೀನಾ ಮತ್ತು ಅಮೆರಿಕ ನಡುವಿನ ಶೀತಲ ಸಮರ ತೀವ್ರಗೊಳ್ಳುತ್ತಿದ್ದು, ಉಕ್ರೇನ್ ವಿಷಯದಲ್ಲಿ ರಷ್ಯಾ ಮತ್ತು ಅಮೆರಿಕ ನಡುವೆ ಅದೇ ಪರಿಸ್ಥಿತಿ ಕಂಡುಬರುತ್ತಿದೆ. ಇಂತಹ ಸಮಯದಲ್ಲಿ, ಚೀನಾ ಮತ್ತು ರಷ್ಯಾ ಸೇರಿದಂತೆ ಯಾವುದೇ ದೇಶವು ತಮ್ಮೊಂದಿಗೆ ಹೋರಾಡಲು ಪ್ರಯತ್ನಿಸಿದರೆ ಅದಕ್ಕೆ ದೃಢವಾದ ಉತ್ತರವನ್ನು ನೀಡಲು ಅಮೆರಿಕ B-21 ರೈಡರ್ ಅನ್ನು ನಿಯೋಜಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!