ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುನೈಟೆಡ್ ಸ್ಟೇಟ್ಸ್ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರ ಬ್ಯಾಗ್‌ಗಳಿಂದ ಹಣವನ್ನು ಕದಿಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಟ್ರಾನ್ಸ್‌ಪೋರ್ಟೇಶನ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಷನ್ ಕೆಲಸಗಾರರು ಪ್ರಯಾಣಿಕರ ಬ್ಯಾಗ್‌ಗಳಿಂದ ಹಣ ಮತ್ತು ಇತರ ವಸ್ತುಗಳನ್ನು ಕದಿಯುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಈ ವರ್ಷ ಜೂನ್ 29 ರಂದು ಪ್ರಯಾಣಿಕರ ಲಗೇಜ್‌ನಿಂದ $ 600 ನಗದು ಮತ್ತು ಇತರ ವಸ್ತುಗಳನ್ನು ಕದ್ದಿಯುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಅವರನ್ನು 20 ವರ್ಷದ ಜೋಸ್ ಗೊನ್ಜಾಲೆಜ್ ಮತ್ತು 33 ವರ್ಷದ ಲ್ಯಾಬಾರಿಯಸ್ ವಿಲಿಯಮ್ಸ್ ಎಂದು ಗುರುತಿಸಲಾಗಿದೆ. ಚೆಕ್‌ಪಾಯಿಂಟ್‌ನಲ್ಲಿ ಕಳ್ಳತನದ ಆರೋಪದ ಮೇಲೆ ತನಿಖೆ ಮಾಡಿ ಅಧಿಕಾರಿಗಳನ್ನು ಅವರನ್ನು ಬಂಧಿಸಿದರು. ಕಳ್ಳತನದ ವಿಡಿಯೋ ಇದೀಗ ಹೊರಬಿದ್ದಿದೆ.
TSA Agents caught on surveillance video stealing hundreds of dollars in cash from passengers’ bags at Miami airport. pic.twitter.com/LhFW9yNRNV
— Mike Sington (@MikeSington) September 13, 2023