Wednesday, September 27, 2023

Latest Posts

ಮುಂಬೈನಲ್ಲಿ ಇನ್ಮುಂದೆ ಡಬಲ್ ಡೆಕ್ಕರ್ ಬಸ್‌ಗಳು ಕಾಣೋದಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಂಟು ದಶಕಗಳ ಕಾಲ ಮುಂಬೈನಲ್ಲಿ ಸೇವೆ ಸಲ್ಲಿಸಿದ್ದ ಡಬಲ್ ಡೆಕ್ಕರ್ ಬಸ್‌ಗಳ ಸೇವೆ ಅಂತ್ಯವಾಗಿದೆ.

1900 ರಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ಡಬಲ್ ಡೆಕ್ಕರ್ ಬಸ್‌ಗಳು ಸೇವೆ ಮಾಡುತ್ತಿದ್ದವು. ಐಕಾನಿಕ್ ಡಬಲ್ ಡೆಕ್ಕರ್ ಇನ್ಮುಂದೆ ನೆನಪು ಮಾತ್ರ.

Anand Mahindra gets emotional as Mumbai bids adieu to iconic red double-decker buses. See post | Mintಮುಂಬೈನಲ್ಲಿ ಏಳು ಡಬಲ್ ಡೆಕ್ಕರ್ ಬಸ್‌ಗಳು ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿದ್ದವು. ಇದರಲ್ಲಿ ಮೂರಕ್ಕೆ ಮಾತ್ರ ಮೇಲ್ಛಾವಣಿ ಇತ್ತು. 15ಕ್ಕೂ ಹೆಚ್ಚು ವರ್ಷಗಳಾದ ಕಾರಣ ಬಸ್‌ಗಳ ಸ್ಥಿತಿ ಚೆನ್ನಾಗಿರಲಿಲ್ಲ. ನಿನ್ನೆಗೆ ಬಸ್‌ಗಳು ತಮ್ಮ ಸೇವೆಯನ್ನು ಅಂತ್ಯಗೊಳಿಸಿವೆ.

Watch: Last Red Double Decker Bus Leaves from Marol Depot in Mumbaiಮೇಲ್ಛಾವಣಿ ಇರುವ ಬಸ್‌ಗಳು ಅಕ್ಟೋಬರ್ 5ರವರೆಗೆ ಸೇವೆ ನೀಡಲಿವೆ. ಕಡೆಯ ದಿನದಂದು ಬಸ್‌ಗೆ ಬಲೂನ್‌ನಿಂದ ಅಲಂಕಾರ ಮಾಡಿ ಬೀಳ್ಕೊಡುಗೆ ನೀಡಲಾಗಿದ್ದು, ಇದರಲ್ಲಿ ಪ್ರಯಾಣಿಸಿದ ಅನೇಕರು ಬಸ್ ಪ್ರಯಾಣದ ಅನುಭವವನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!