ಪಾಕಿಸ್ತಾನಕ್ಕೆ F-16 ಫೈಟರ್ ಜೆಟ್ ಫ್ಲೀಟ್‌, 450 ಮಿಲಿಯನ್‌ ಡಾಲರ್‌ ಭದ್ರತಾ ನೆರವು ಘೋಷಿಸಿದ ಅಮೆರಿಕ: ಭಾರತದಿಂದ ಖಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಅಮೆರಿಕವು F-16 ಫೈಟರ್ ಜೆಟ್ ಫ್ಲೀಟ್‌ ಹಾಗೂ 450 ಮಿಲಿಯನ್ ಡಾಲರ್‌ ವೆಚ್ಚದ ಸುಸ್ಥಿರ ಭದ್ರತಾ ಪ್ಯಾಕೇಜ್‌ ಅನ್ನು ಘೋಷಿಸಿದೆ. ಈ ನಿರ್ಧಾರವನ್ನು ಭಾರತವು ತೀವ್ರವಾಗಿ ಖಂಡಿಸಿದ್ದು ದೆಹಲಿಯು ದಕ್ಷಿಣ ಮತ್ತು ಮಧ್ಯ ಏಷ್ಯಾದ ವ್ಯವಹಾರಗಳ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರಿಗೆ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕವು ಪಾಕಿಸ್ತಾನಕ್ಕೆ ಭವಿಷ್ಯದ ಭಯೋತ್ಪಾದನಾ ನಿಗ್ರಹ ಬೆದರಿಕೆಗಳನ್ನು ಎದುರಿಸಲು ಪಾಕಿಸ್ತಾನಕ್ಕೆ ಸಹಾಯ ಮಾಡಲು ಬಿಡೆನ್‌ ಆಡಳಿತವು ಈ ಪ್ಯಾಕೇಜ್‌ ಅನ್ನು ಅನುಮೋದಿಸಿದೆ.

ಈ ಹಿಂದೆ 2018ರಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಅಫ್ಘಾನ್ ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ಭಯೋತ್ಪಾದಕ ಗುಂಪುಗಳನ್ನು ಹತ್ತಿಕ್ಕಲು ಮತ್ತು ದೇಶದಲ್ಲಿ ಅವರ ಸುರಕ್ಷಿತ ಧಾಮಗಳನ್ನು ಕೆಡವಲು ವಿಫಲವಾದ ಕಾರಣಕ್ಕಾಗಿ ಇಸ್ಲಾಮಾಬಾದ್‌ಗೆ ಸುಮಾರು USD 2 ಬಿಲಿಯನ್ ಭದ್ರತಾ ನೆರವನ್ನು ಸ್ಥಗಿತಗೊಳಿಸಿತ್ತು. ಆದರೆ ಪ್ರಸ್ತುತ ಬಿಡೆನ್‌ ಸರ್ಕಾರವು ಪುನಃ ಆ ನೆರವನ್ನು ನೀಡಲು ಮುಂದಾಗಿದೆ.

ಇದನ್ನು ಭಾರತವು ತೀವ್ರವಾಗಿ ಖಂಡಿಸಿದ್ದು ಪಾಕಿಸ್ತಾನಕ್ಕೆ ಅಮೆರಿಕವು ಭದ್ರತಾ ಪ್ಯಾಕೇಜ್‌ ನೀಡುವುದನ್ನು ವಿರೋಧಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!