ಕರ್ನಾಟಕ ಮೂಲದ ವೈದ್ಯರಿಗೆ WHO ಜವಾಬ್ದಾರಿ ನೀಡಲು ಅಮೆರಿಕ ನಿರ್ಧಾರ

ಹೊಸದಿಂಗತ ಡಿಜಿಟಲ್ ಡೆಸ್ಕ್:

ವಿಶ್ವಸಂಸ್ಥೆಯ ಆರೋಗ್ಯ ಮಂಡಳಿಯಲ್ಲಿ ಕರ್ನಾಟಕ ಮೂಲದ ವೈದ್ಯರನ್ನು ನೇಮಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದಾರೆ. WHOನಲ್ಲಿ ಅಮೆರಿಕದ ಪ್ರತಿನಿಧಿಯಾಗಿ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಅವರನ್ನು ನೇಮಿಸಲು ಅಮೆರಿಕ ನಿರ್ಧರಿಸಿದೆ.

ಈ ಸಂಬಂಧ ಅಮೆರಿಕ ಪಾರ್ಲಿಮೆಂಟ್​ ಸೆನೆಟ್​ಗೆ ಪ್ರಸ್ತಾವನೆ ಕಳುಹಿಸಿಕೊಟ್ಟಿದೆ. ಅಮೆರಿಕವು ಎರಡನೇ ಬಾರಿ ವಿಶ್ವಸಂಸ್ಥೆಗೆ ಈ ಪ್ರಸ್ತಾವನೆಯನ್ನು ಸಲ್ಲಿಸಿದೆ. 46 ವರ್ಷದ ಡಾ.ವಿವೇಕ್ ಮೂರ್ತಿ ಹೆಸರನ್ನು ಅಕ್ಟೋಬರ್ 2022ರಲ್ಲಿಯೂ ಅಮೆರಿಕ ಪ್ರಸ್ತಾವನೆ ಮಾಡಿತ್ತು. ಈ ಪ್ರಸ್ತಾವನೆಯು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯಲ್ಲಿ ಬಾಕಿ ಉಳಿದುಕೊಂಡಿತ್ತು. ಹೀಗಾಗಿ ಮತ್ತೊಮ್ಮೆ ಶಿಫಾರಸು ಮಾಡಲಾಗಿದೆ.

2021ರಲ್ಲಿ ಡಾ. ವಿವೇಕ್ ಮೂರ್ತಿ ಅವರನ್ನು ಅಮೆರಿಕದ 21ನೇ ಸರ್ಜನ್ ಜನರಲ್ ಆಗಿ ಅನುಮೋದಿಸಿದೆ. ಅದಕ್ಕೂ ಮೊದಲು ಅವರು ಬರಾಕ್ ಒಬಮಾ ಅಧ್ಯಕ್ಷತೆಯಲ್ಲಿ 19ನೇ ಸರ್ಜನ್ ಜನರಲ್ ಆಗಿದ್ದರು. ಶ್ವೇತಭವನದ ಪ್ರಕಾರ, ಸರ್ಜನ್ ಜನರಲ್ ಅಮೆರಿಕದ ಉನ್ನತ ವೈದ್ಯ.

ಆ ದೇಶಕ್ಕೆ ಉತ್ತಮ ಆರೋಗ್ಯ ನೀತಿಯನ್ನು ಸಿದ್ಧಪಡಿಸುವುದು ಅಮೆರಿಕ ಸರ್ಜನ್ ಜನರಲ್ ಜವಾಬ್ದಾರಿ. ವಿವೇಕ್ ಮೂರ್ತಿ ಅವರು ಅಮೆರಿಕ ಪಬ್ಲಿಕ್ ಹೆಲ್ತ್​ ಸರ್ವೀಸ್ ಕಮಿಷನ್ಡ್​ ಕಾರ್ಪ್ಸ್​ನ ವೈಸ್ ಅಡ್ಮಿರಲ್ ಕೂಡ ಆಗಿದ್ದಾರೆ. ಇದರಲ್ಲಿ ಆರು ಸಾವಿರಕ್ಕೂ ಹೆಚ್ಚು ಆರೋಗ್ಯಾಧಿಕಾರಿಗಳಿದ್ದು, ಡಾ.ವಿವೇಕ್ ಮೂರ್ತಿ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!