ತಕ್ಷಣ ಪಾಕ್ ತೊರೆಯುವಂತೆ ತನ್ನ ಪ್ರಜೆಗಳಿಗೆ ಅಮೆರಿಕ ರಾಯಭಾರ ಕಚೇರಿ ಖಡಕ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಕ್ಷಿಪಣಿಗಳ ದಾಳಿಗೆ ಲಾಹೋರ್‌ನ ರೆಡಾರ್‌ ಕೇಂದ್ರವೇ ಧ್ವಂಸವಾಗಿದೆ. ಈಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಪಾಕ್‌ನಲ್ಲಿರುವ ಯುಎಸ್‌ ಪ್ರಜೆಗಳು ಕೂಡಲೇ ದೇಶ ತೊರೆಯುವಂತೆ ಹೇಳಿದೆ.

ಭಾರತೀಯ ನಗರಗಳನ್ನು ಟಾರ್ಗೆಟ್‌ ಮಾಡಿದ್ದ ಪಾಕ್‌ಗೆ ದಿಟ್ಟ ಉತ್ತರ ನೀಡಿದ ಭಾರತೀಯ ವಾಯುಸೇನೆ, ಲಾಹೋರ್‌, ಶೇಖ್‌ಪುರ, ಸಿಯಾಲ್‌ ಕೋಟ್‌, ಗುಜರನ್‌ ವಾಲಾ ಮತ್ತು ನರೊವಾಲಾ ಮತ್ತ ಚಕ್ವಾಲ್‌ ಮೇಲೂ ಭಾರತದ ಕಾಮಕಾಜಿ ಡ್ರೋನ್‌ ದಾಳಿ ನಡೆಸಿದೆ.

ಲಾಹೋರ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿದ ಬೆನ್ನಲ್ಲೇ ಎಚ್ಚೆತ್ತ ಅಮೆರಿಕ ರಾಯಭಾರ ಕಚೇರಿ ತನ್ನೆಲ್ಲಾ ಸಿಬ್ಬಂದಿಗೆ ಆಶ್ರಯ ನೀಡುವಂತೆ ಕೇಳಿದೆ. ಅಲ್ಲದೇ ಸಂಘರ್ಷ ಪೀಡಿತ ಪ್ರದೇಶಗಳಲ್ಲಿರುವ ಅಮೆರಿಕದ ನಾಗರಿಕರು ಕೂಡಲೇ ದೇಶ ತೊರೆಯುವಂತೆ ಸೂಚನೆ ನೀಡಿದೆ. ಎಲ್ಲ ಯುಎಸ್‌ ನಾಗರಿಕರು ಸಾಧ್ಯವಾದ್ರೆ ಈ ಕೂಡಲೇ ಹೊರಡಿ ಅಥವಾ ಪಾಕ್‌ನ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದುಕೊಳ್ಳಿ ಎಂದು ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here