ಪಾಕಿಸ್ತಾನದ ಮೇಲೆ ಭಾರತದಿಂದ ಡ್ರೋನ್ ದಾಳಿ: ರಾವಲ್ಪಿಂಡಿ ಸ್ಟೇಡಿಯಂ ಧ್ವಂಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸೇನೆಯಿಂದ ಪಾಕ್ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮುಂದುವರೆಸಲಾಗಿದೆ. ಇಂದು ಪಾಕಿಸ್ತಾನದ ವಿವಿಧೆಡೆ ಡ್ರೋನ್ ದಾಳಿ ನಡೆಸಲಾಗಿದ್ದು, ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಧ್ವಂಸಗೊಳಿಸಲಾಗಿದೆ.

ಪಾಕಿಸ್ತಾನದ ಹಲವು ನಗರಗಳ ಮೇಲೆ ಡ್ರೋನ್ ದಾಳಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಗೂ ವಿದೇಶಿ ಕ್ರಿಕೆಟಿಗರು ರಾವಲ್ಪಿಂಡಿ ತೊರೆಯುವಂತೆ ಪಿಸಿಬಿ ಸೂಚನೆ ನೀಡಿದೆ.

ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ ಸೇರಿದಂತೆ ಪಾಕಿಸ್ತಾನದ 12 ನಗರಗಳ ಮೇಲೆ ಡ್ರೋನ್ ದಾಳಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪಿಸಿಎಲ್ ಟೂರ್ನಿ ಆಡುತ್ತಿರುವ ಪಾಕಿಸ್ತಾನ ಹಾಗೂ ವಿದೇಶಿ ಕ್ರಿಕೆಟಿಗರು ರಾವಲ್ಪಿಂಡಿ ತೊರೆಯುವಂತೆ ಪಿಸಿಬಿ ಸೂಚನೆ ನೀಡಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!