March 6, 2026
Friday, March 6, 2026
spot_img

ರಷ್ಯಾದಿಂದ ತೈಲ ಖರೀದಿಸೋಕೆ 30 ದಿನ ಮಾತ್ರ ಅವಕಾಶ: ಭಾರತಕ್ಕೆ ಗಡುವು ಕೊಟ್ಟ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಪರಿಸ್ಥಿತಿಯ ನಡುವೆ ಭಾರತದ ಇಂಧನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರಷ್ಯಾದ ಕಚ್ಚಾ ತೈಲ ಖರೀದಿಗೆ ಅಮೆರಿಕ ಸರ್ಕಾರ 30 ದಿನಗಳ ವಿಶೇಷ ವಿನಾಯಿತಿ ನೀಡಿದೆ. ಈ ಕ್ರಮದಿಂದ ಭಾರತದ ಇಂಧನ ಪೂರೈಕೆಗೆ ತಾತ್ಕಾಲಿಕ ನೆರವು ಸಿಕ್ಕಂತಾಗಿದೆ.

ಅಮೆರಿಕದ ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ ಈ ಸಂಬಂಧ ವಿಶೇಷ ಪರವಾನಗಿ ನೀಡಿದ್ದು, 2026ರ ಮಾರ್ಚ್ 5ರೊಳಗೆ ಹಡಗುಗಳಲ್ಲಿ ಲೋಡ್ ಮಾಡಲಾದ ರಷ್ಯಾ ಮೂಲದ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಮತ್ತು ವಿತರಣೆ ಮುಂದುವರಿಸಲು ಅವಕಾಶ ಕಲ್ಪಿಸಿದೆ. ಈ ವಹಿವಾಟುಗಳನ್ನು 2026ರ ಏಪ್ರಿಲ್ 3ರವರೆಗೆ ಅನುಮತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರವಾಗಿಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಭಾರತವನ್ನು ಅಮೆರಿಕದ ಪ್ರಮುಖ ಸಹಭಾಗಿಯಾಗಿ ಪರಿಗಣಿಸಲಾಗುತ್ತಿದೆ ಎಂಬುದನ್ನೂ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !