ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಈ ಬಗ್ಗೆ ಆಡಳಿತ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. 81 ವರ್ಷದ ಜೋ ಬೈಡನ್ ಸೌಮ್ಯವಾದ ಕೊರೊನಾ ವೈರಸ್ ಲಕ್ಷಣಗಳನ್ನು ಹೊಂದಿದ್ದಾರೆ. ಅವರು ತಮ್ಮ ಕರ್ತವ್ಯಗಳನ್ನು ಶ್ವೇತಭವನದ್ಲಲೇ ಮಾಡುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಅಧ್ಯಕ್ಷ ಜೋ ಬೈಡನ್ ಈಗಾಗಲೇ ಕೊರೊನಾ ವೈರಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಮತ್ತು ಎರಡು ಬೂಸ್ಟರ್ ಲಸಿಕೆಯನ್ನೂ ಸ್ವೀಕರಿಸಿದ್ದಾರೆ. ಲವು ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು ಮತ್ತು ಅವರ ಕೊರೊನಾ ಪರೀಕ್ಷೆಯು ಧನಾತ್ಮಕವಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಶ್ವೇತಭವನವು ಪತ್ರಿಕಾ ಪ್ರಕಟಣೆಯಲ್ಲಿ ಘೋಷಿಸಿದೆ.