ಅಮೆರಿಕದಲ್ಲಿ ಮೊದಲ ಮಂಕೀ ಪಾಕ್ಸ್‌ ಪ್ರಕರಣ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೆರಿಕದಲ್ಲಿ ಈ ವರ್ಷದ ಮೊದಲ ಮಂಕೀ ಫಾಕ್ಸ್‌ ಪ್ರಕರಣ ಪತ್ತೆಯಾಗಿರುವುದಾಗಿ ವರದಿಗಯಾಗಿದೆ. ಅಮೆರಿಕದ ಮ್ಯಾಸಚೂಸೆಟ್ಸ್ ನಲ್ಲಿ ಕೆನಡಾಗೆ ಪ್ರವಾಸ ಮಾಡಿದ್ದ ವ್ಯಕ್ತಿಯೋರ್ವನಲ್ಲಿ ವೈರಸ್‌ ಪತ್ತೆಯಾಗಿದೆ.

ಈ ಹಿನ್ನೆಲಯಲ್ಲಿ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಮಂಕಿ ಫಾಕ್ಸ್‌ ಸೋಮಖಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ಜನರನ್ನು ಪತ್ತೆ ಹಚ್ಚಲಾಗುತ್ತಿದೆ.

ಏನಿದು ಮಂಕಿಪಾಕ್ಸ್‌ ?
ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದ ಈ ವೈರಸ್‌ನಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಗಳಿವೆ. ಇವು ಸಿಡುಬುರೋಗದಂತೆಯೇ ಕಾಣುವ ಬೊಬ್ಬೆಗಳನ್ನು ಸೃಷ್ಟಿಸುತ್ತವೆ. ಮಂಕಿಪಾಕ್ಸ್ ಸಿಡುಬುಗೆ ಹೋಲಿಸಬಹುದಾದ ರೋಗಲಕ್ಷಣಗಳನ್ನು ಹೊಂದಿದೆ ಆದರೆ ಅದರಷ್ಟು ತೀವ್ರವಾಗಿರುವುದಿಲ್ಲ.

ವ್ಯಾಕ್ಸಿನೇಷನ್‌ನಿಂದಾಗಿ 1980 ರಲ್ಲಿ ಪ್ರಪಂಚದಾದ್ಯಂತ ಸಿಡುಬು ನಿರ್ಮೂಲನೆಯಾಗಿತ್ತು. ಆದರೆ ಮಂಕಿಪಾಕ್ಸ್ ಇನ್ನೂ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಇತರೆಡೆಗಳಲ್ಲಿ ಅಸ್ತಿತ್ವದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!