ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಎರಿಕ್‌ ಗಾರ್ಸೆಟ್ಟಿ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಮಾಜಿ ಲಾಸ್ ಏಂಜಲೀಸ್ ಮೇಯರ್ ಮತ್ತು ಅಧ್ಯಕ್ಷ ಜೋ ಬೈಡನ್‌ ಅವರ ನಿಕಟವರ್ತಿಯಾದ ಎರಿಕ್ ಗಾರ್ಸೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.

ಎರಿಕ್‌ ಗಾರ್ಸೆಟ್ಟಿ ಅವರ ನಾಮನಿರ್ದೇಶನವನ್ನು ಅಮೆರಿಕದ ಸೆನೆಟ್ 52-42 ಮತಗಳಿಂದ ಅನುಮೋದನೆ ನೀಡಿದೆ.

ಈ ವರ್ಷ ಜನವರಿಯಲ್ಲಿ ಬೈಡನ್‌ ಅವರು ಮತ್ತೊಮ್ಮೆ ಎರಿಕ್‌ ಅವರನ್ನು ರಾಯಭಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದರು. ಎರಿಕ್‌ ಅವರ ನಾಮನಿರ್ದೇಶನವನ್ನು ಮತಕ್ಕೆ ಹಾಕಲು ಅಮೆರಿಕ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಬಾಬ್‌ ಮೆನೆಂಡೆಝ್‌ ಅವರು ಕಳೆದ ಫೆಬ್ರುವರಿ 28ಕ್ಕೆ ದಿನಾಂಕ ನಿಗದಿಪಡಿಸಿದ್ದರು. ಆದರೆ ಇದನ್ನು ಇಲ್ಲಿಯವರೆಗೂ ಮುಂದೂಡಲಾಗಿತ್ತು.

ಲಾಸ್‌ ಏಂಜಲೀಸ್‌ನ ಮಾಜಿ ಮೇಯರ್‌ ಎರಿಕ್‌ ಅವರನ್ನು ಭಾರತದ ಅಮೆರಿಕ ರಾಯಭಾರಿಯನ್ನಾಗಿ 2021ರ ಜುಲೈನಲ್ಲಿಯೂ ಅಧ್ಯಕ್ಷ ಜೊ ಬೈಡನ್‌ ನಾಮನಿರ್ದೇಶನ ಮಾಡಿದ್ದರು.

ಎರಿಕ್‌ ಅವರನ್ನು ಈ ಹುದ್ದೆಗೆ ನೇಮಕಾತಿ ಮಾಡಲು ಆಡಳಿತಾರೂಢ ಡೆಮಾಕ್ರೆಟಿಕ್‌ ಪಕ್ಷಕ್ಕೆ ಸಾಕಷ್ಟು ಬೆಂಬಲ ಇರಲಿಲ್ಲ. ಜೊತೆಗೆ ಎರಿಕ್‌ ಅವರ ಮೇಲೆ ಲೌಂಗಿಕ ದೌರ್ಜನ್ಯದ ಆರೋಪಗಳು ಇರುವ ಕಾರಣ ಅವರ ನಾಮನಿರ್ದೇಶನವನ್ನು ರಿಪಬ್ಲಿಕನ್‌ ಪಕ್ಷ ವಿರೋಧಿಸಿತ್ತು.
ಹೀಗಾಗಿ ಈ ನಾಮನಿರ್ದೇಶನವನ್ನು ಅಮೆರಿಕದ ಸಂಸತ್ತಿನಲ್ಲಿ ಮತಕ್ಕೆ ಹಾಕಲಾಗಲಿಲ್ಲ. ಇದರಿಂದಾಗಿ ಎರಿಕ್‌ ಅವರ ನಾಮನಿರ್ದೇಶನಕ್ಕೆ ತಡೆ ನೀಡಲಾಗಿತ್ತು.

ಚೀನಾದ ದಬ್ಬಾಳಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಮೆರಿಕ, ಭಾರತದೊಂದಿಗೆ ಬಲಿಷ್ಠ ರಕ್ಷಣಾ ಮತ್ತು ಕಾರ್ಯತಂತ್ರ ಆಧಾರಿತ ಪಾಲುದಾರಿಕೆ ಹೊಂದುವ ಅಗತ್ಯವಿದೆ. ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಮತ್ತು ರಾಷ್ಟ್ರೀಯ ಭದ್ರತೆ ಬಲಗೊಳಿಸಲು ಭಾರತಕ್ಕೆ ರಾಯಭಾರಿಯನ್ನು ನೇಮಕ ಮಾಡುವುದು ಅತ್ಯಗತ್ಯ ಎಂದು ಅಮೆರಿಕ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!