ಹೊಸದಿಗಂತ ಡಿಜಿಟಲ್ ಡೆಸ್ಕ್ :
ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಅಮೆರಿಕ ಸಿರಿಯಾದ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಸಿರಿಯಾ ಸರ್ವಾಧಿಕಾರಿ ಬಶರ್ ಅಲ್ ಅಸ್ಸಾದ್ ಅವರ ಆಡಳಿತ ಕೊನೆಗೊಂಡ ಬೆನ್ನಲ್ಲೇ ಅಮೆರಿಕ ಐಸಿಸ್ ಉಗ್ರ ಸಂಘಟನೆಯ ನೆಲೆಯ ಮೇಲೆ ದಾಳಿ ನಡೆಸಿದೆ. ಮಧ್ಯ ಸಿರಿಯಾದಲ್ಲಿರುವ 75ಕ್ಕೂ ಹೆಚ್ಚು ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದೆ.
ಸಿರಿಯಾದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಬಂಡುಕೋರರು ರಾಜಧಾನಿ ಡಮಾಸ್ಕಸ್ ಸೇರಿದಂತೆ ಹಲವು ಪ್ರದೇಶಗಳನ್ನು ಸುತ್ತುವರೆದಿದ್ದಾರೆ. ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಇದೇ ಸರಿಯಾದ ಸಮಯವೆಂಬಂತೆ ಕಾದು ಕುಳಿತಿದ್ದ ಅಮೆರಿಕವು ಸಿರಿಯಾದ ಐಸಿಸ್ ನೆಲೆಗಳ ಮೇಲೆ ದಾಳಿ ನಡೆಸಿದೆ. ರಾಜಧಾನಿ ಸೇರಿದಂತೆ ದೊಡ್ಡ ನಗರಗಳನ್ನು ಈಗ ಜಿಹಾದಿ ಬಂಡುಕೋರರು ವಶಪಡಿಸಿಕೊಂಡಿದ್ದಾರೆ.
ಸರ್ವಾಧಿಕಾರಿ ಅಸ್ಸಾದ್ ದೇಶ ತೊರೆದ ನಂತರ ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಉಗ್ರರು ಸಿರಿಯಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಘಟನೆ ವಶಪಡಿಸಿಕೊಂಡರೂ ಅಲ್ಲಿ ಐಸಿಸ್ ಉಗ್ರರು ಇನ್ನೂ ಇದ್ದಾರೆ. ಮುಂದಿನ ದಿನಗಳಲ್ಲಿ ಐಸಿಸ್ ಉಗ್ರರು ಚಿಗುರಿ ಮತ್ತೆ ಹೋರಾಟಕ್ಕೆ ಇಳಿಯಬಾರದು ಎಂಬ ಕಾರಣಕ್ಕೆ ಅಮೆರಿಕ ಏರ್‌ಸ್ಟ್ರೈಕ್ ನಡೆಸಿದೆ.