ಮಹಿಳೆಯರ ಗರ್ಭಪಾತದ ಹಕ್ಕು ರದ್ದುಗೊಳಿಸಿದ ಅಮೆರಿಕಾ ಸುಪ್ರೀಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಅಮೆರಿಕಾದ ಸುಪ್ರೀಂಕೋರ್ಟ್ ಸಾಂವಿಧಾನಿಕ ರಕ್ಷಣೆ ಗರ್ಭಪಾತದ ಹಕ್ಕನ್ನು ಕೊನೆಗೊಳಿಸಿದೆ. 50 ವರ್ಷಗಳ ಹಿಂದೆ ಮಹಿಳೆಯರಿಗೆ ಗರ್ಭಪಾತದ ಹಕ್ಕನ್ನು ನೀಡಿದ ಅಮೆರಿಕಾ ಇದೀಗ ಅದನ್ನು ತೊಲಗಿಸಿದೆ. ಒಬ್ಬ ಮಹಿಳೆ ತಾನು ತಾಯಿಯಾಗಬೇಕೆ..? ಬೇಡವೇ..? ಎಂದು ನಿರ್ಧರಿಸುವ ಹಕ್ಕನ್ನು ಕಸಿದುಕೊಂಡಿರುವುದಕ್ಕೆ ಪ್ರಗತಿಪರರು ಮತ್ತು ಪ್ರಜಾಪ್ರಭುತ್ವವಾದಿಗಳು ಆಕ್ರೋಶಗೊಂಡಿದ್ದಾರೆ. ಈ ತೀರ್ಪಿಗೆ ಕಾರ್ಪೊರೇಟ್‌ ಸಂಸ್ಥೆಗಳು ಅಸಮ್ಮತಿ ಸೂಚಿಸಿದು, ತಮ್ಮ ಉದ್ಯೋಗಿಗಳು ಬೇರೆ ದೇಶಗಳಿಗೆ ಹೋಗಿ ಗರ್ಭಪಾತ ಮಾಡಿಸಿಕೊಳ್ಳಲು ಬಯಸಿದರೆ ಪ್ರಯಾಣದ ವೆಚ್ಚವನ್ನು ಪಾವತಿಸುವುದಾಗಿ ಗೂಗಲ್ ಮತ್ತು ಫೇಸ್‌ಬುಕ್‌ನಂತಹ ಕಂಪನಿಗಳು ಘೋಷಿಸಿವೆ.

ಕೆಲವು ವಾರಗಳ ಹಿಂದೆ ಸೋರಿಕೆಯಾದ ಪ್ರತಿಯ ಪ್ರಕಾರ, ದೇಶದ ಸುಪ್ರೀಂ ಕೋರ್ಟ್ ರೋ ವಿ ವೇಡ್ ಪ್ರಕರಣವನ್ನು ರದ್ದುಮಾಡಿದೆ. ಗರ್ಭಪಾತದ ಹಕ್ಕನ್ನು ಆಯಾ ರಾಜ್ಯಗಳಿಗೆ ನಿರ್ಧಾರದ ಹಕ್ಕನ್ನು ನೀಡಿದೆ. ಇದರ ಪರಿಣಾಮ ಮಹಿಳೆಯರು ಇಷ್ಟ ಇದ್ದರೂ, ಇಲ್ಲದಿದ್ದರೂ ಮಕ್ಕಳನ್ನು ಪಡೆಯುವ ಅನಿವಾರ್ಯತೆ ನಿರ್ಮಾಣವಾಗಿದೆ.

ವಿವಾಹೇತರ ಸಂಬಂಧಗಳು ಅಮೇರಿಕಾ ಪೂರ್ತಿ ವ್ಯಾಪಕವಾಗಿ ಹರಡಿದೆ. ಇದನ್ನು ತಡೆಯುವ ಸಲುವಾಗಿ ಈ ತೀರ್ಪು ಸಹಾಯ ಮಾಡುತ್ತದೆ ಎಂದು ಸಂಪ್ರದಾಯವಾದಿಗಳು ವಾದಿಸುತ್ತಾರೆ. ವಾಸ್ತವವಾಗಿ ಅಮೇರಿಕಾ ಎಂದರೆ ಆಧುನಿಕತೆ, ಮುಕ್ತ ಜೀವನ ಎಂಬ ಅರ್ಥವಿದೆ. ಇಂತಹ ದೇಶದಲ್ಲಿ ಸಂಪ್ರದಾಯ ಎಂಬ ಪದಕ್ಕೆ ಬೆಲೆಯೇ ಇಲ್ಲ. ಆದರೆ ಸಂಪ್ರದಾಯವಾದಿಗಳ ಹೆಸರಿನಲ್ಲಿ ಹೆಣ್ಣುಮಕ್ಕಳ  ಬದುಕನ್ನು ಅಪಾಯಕ್ಕೆ ಸಿಲುಕಿಸಲಾಗುತ್ತಿದೆ ಎಂದು ಪ್ರಗತಿಪರರು ಪ್ರತಿಪಾದಿಸಿದ್ದಾರೆ. ಸಂಪ್ರದಾಯವಾದಿಗಳು ತೀರ್ಪನ್ನು ಸ್ವಾಗತಿಸಿದರೆ, ಪ್ರಗತಿಪರರು ಅದನ್ನು ವಿರೋಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!