ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ರಸ್ತೆಗಳ ಗುಂಡಿಗಳಿಂದ ನಾನಾ ಅನಾಹುತಗಳು ಸಂಭವಿಸಿದ್ದು, ಸದ್ಯ ಈ ಯಮಕೂಪಗಳನ್ನು ಬಿಬಿಎಂಪಿ ಮುಚ್ಚುವ ಕೆಲಸ ಮಾಡುತ್ತಿದೆ.
ಸರ್ಕಾರದ ಸೂಚನೆ ಬೆನ್ನಲ್ಲೇ ನಗರದ ರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚುವ ಉದ್ದೇಶದಿಂದ ಬಿಬಿಎಂಪಿ ‘ಜೆಟ್ ಪ್ಯಾಚರ್ ಯಂತ್ರ’ವನ್ನು ಬಳಸಲು ಆರಂಭಿಸಿದೆ.
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ ಯಂತ್ರವನ್ನು ಬಳಕೆ ಮಾಡಲಾಗುತ್ತಿದ್ದು, ಈ ಮೂಲಕ ಪ್ರಮುಖ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ.
ರಾಜರಾಜೇಶ್ವರಿ ನಗರದಲ್ಲಿ ಒಟ್ಟು 20 ವಾರ್ಡ್‌ಗಳಿದ್ದು, 216.45 ಕಿ.ಮೀ ಪ್ರಮುಖ ರಸ್ತೆಗಳು ಸೇರಿದಂತೆ ಒಟ್ಟು 2,045 ಕಿ.ಮೀ ಉದ್ದದ ರಸ್ತೆಗಳಿವೆ. ಮೇ 20ರಿಂದ 2,904 ಗುಂಡಿಗಳನ್ನು ಗುರುತಿಸಲಾಗಿದೆ. ಜೆಟ್ ಪ್ಯಾಚರ್ ಯಂತ್ರಗಳ ಬಳಕೆ ಮೂಲಕ ಈ ವರೆಗೂ 2,494 ಗುಂಡಿಗಲನ್ನು ಮುಚ್ಚಲಾಗಿದೆ. ಜೆಟ್ ಪ್ಯಾಚರ್’ ಯಂತ್ರದ ಮೂಲಕ ಪ್ರಮುಖ ರಸ್ತೆಗಳಲ್ಲಿ ಒಂದು ಬಾರಿಗೆ 150 ಚ.ಮೀ ನಿಂದ 180 ಚ.ಮೀ ಗುಂಡಿಗಳನ್ನು ಮುಚ್ಚಬಹುದು. ಒಂದು ಗಂಟೆಯಲ್ಲಿ ಕೆಲಸ ಮುಗಿಯಲಿದ್ದು, ಕೂಡಲೇ ವಾಹನಗಳು ಸಂಚಾರ ಮಾಡಬಹುದಾಗಿದೆ.