ಕಡಲ ಸಂವಹನಕ್ಕೆ ಕ್ವಾಂಟಂ ತಂತ್ರಜ್ಞಾನ ಬಳಕೆ: ನೌಕಾಸೇನೆ-RRI ನಡುವೆ ಒಪ್ಪಂದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಡಲ ಕಣ್ಗಾವಲಿನಲ್ಲಿ ಕ್ವಾಟಂ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ಸುರಕ್ಷಿತ ಮತ್ತುವೇಗದ ಸಂವಹನ ವ್ಯವಸ್ಥೆಯನ್ನು ಸೃಷ್ಟಿಸಲು ಭಾರತೀಯ ನೌಕಾ ಸೇನೆ ಹಾಗು ರಾಮನ್‌ ರಿಸರ್ಚ್ ಇನ್‌ಸ್ಟಿಟ್ಯೂಟ್ (RRI) ನಡುವೆ ಒಪ್ಪಂದ ಏರ್ಪಟ್ಟಿದೆ. ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಆರ್‌ಆರ್‌ಐ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ಸ್ವಾಯತ್ತ ಸಂಸ್ಥೆಯಾಗಿದ್ದು ಕ್ವಾಂಟಮ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಸುರಕ್ಷಿತ ಸಮುದ್ರ ಸಂವಹನವನ್ನು ಅಭಿವೃದ್ಧಿಪಡಿಸಲು ಭಾರತೀಯ ನೌಕಾಪಡೆಯೊದಿಗೆ ಜಂಟಿಯಾಗಿ ಕೆಲಸ ಮಾಡಲಿದೆ.

“ಈ ಒಪ್ಪಂದದ ಅಡಿಯಲ್ಲಿ ಭಾರತೀಯ ನೌಕಾಸೇನೆಯೊಂದಿಗೆ ಕ್ವಾಂಟಮ್ ವಿತರಣಾ ತಂತ್ರಗಳನ್ನು ಅಭಿವೃದ್ಧಿಪಡಿಸುವ ಸಂಶೋಧನಾ ಪ್ರಯತ್ನಗಳನ್ನು ರಾಮನ್‌ ರಿಸರ್ಚ್ ಇನ್‌ಸ್ಟಿಟ್ಯೂಟ್ ನಡೆಸಲಿದ್ದು RRI ಯ ಕ್ವಾಂಟಮ್ ಮಾಹಿತಿ ಮತ್ತು ಕಂಪ್ಯೂಟಿಂಗ್ (ಕ್ವಿಐಸಿ) ಲ್ಯಾಬ್ ಈ ಪ್ರಯತ್ನವನ್ನು ಮುನ್ನಡೆಸಲಿದೆ. ಇದು ಭಾರತೀಯ ನೌಕಾಸೇನೆಯ ಬಾಹ್ಯಾಕಾಶ ಸಂವಹನಗಳಿಗೆ ಸಹಾಯಕವಾಗಲಿದೆ” ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ ಐದು ವರ್ಷಗಳ ಅವಧಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದ್ದು ಒಪ್ಪಂದಕ್ಕೆ ಆರ್‌ಆರ್‌ಐ ನಿರ್ದೇಶಕ ಪ್ರೊಫೆಸರ್ ತರುಣ್ ಸೌರದೀಪ್ ಮತ್ತು ಭಾರತೀಯ ನೌಕಾಪಡೆಯ ಮೆಟೀರಿಯಲ್ ಮುಖ್ಯಸ್ಥ ವೈಸ್ ಅಡ್ಮಿರಲ್ ಸಂದೀಪ್ ನೈತಾನಿ ಸಹಿ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!