ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಎರಡೇ ದಿನದಲ್ಲಿ ಜಿ20 ಶೃಂಗಸಭೆ ಆರಂಭವಾಗಲಿದೆ. ಶೃಂಗಸಭೆಗೆ ವಿಶ್ವ ನಾಯಕರು ಆಗಮಿಸುತ್ತಿದ್ದು, ದೆಹಲಿಯಲ್ಲಿ ವಿಭಿನ್ನ ಅಲಂಕಾರಗಳನ್ನು ಮಾಡಲಾಗಿದೆ. ಅಲಂಕಾರದ ಭಾಗವಾಗಿ ಶಿವಲಿಂಗ ಆಕಾರದ ಕಾರಂಜಿಯನ್ನು ಬಳಕೆ ಮಾಡಲಾಗಿದೆ.
ದೆಹಲಿಯ 21ಕ್ಕೂ ಹೆಚ್ಚು ಕಡೆ ಈ ಶಿವಲಿಂಗ ಕಾರಂಜಿಗಳಿದ್ದು, ದೆಹಲಿ ಆಡಳಿತ ಪಕ್ಷ ಆಮ್ ಆದ್ಮಿ ಇದನ್ನು ವಿರೋಧಿಸಿದೆ. ಶಿವಲಿಂಗಕ್ಕೆ ಅದರದ್ದೇ ಆದ ಭಕ್ತಿ ಪ್ರಾಧಾನ್ಯತೆ ಇದೆ, ಅದನ್ನು ಅಲಂಕಾರಿಕ ವಸ್ತುವನ್ನಾಗಿ ಬಳಸುವುದು ತಪ್ಪು. ಶಿವಲಿಂಗಕ್ಕೆ ಮಾಡಿದ ಅವಮಾನವಿದು, ಕೋಟ್ಯಂತರ ಶಿವಭಕ್ತರ ಭಾವನೆಗೆ ಧಕ್ಕೆ ತರುವ ಸನ್ನಿವೇಶ ಎಂದು ಹೇಳಿದ್ದಾರೆ.
ಈ ಹೇಳಿಕೆ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಎಲ್ಲ ವಿಷಯಗಳನ್ನು ರಾಜಕೀಯ ಮಾಡುವುದು ಸರಿಯಲ್ಲ ಎಂದಿದೆ.