ಹೊಸದಿಗಂತ ಡಿಜಿಟಲ್ ಡೆಸ್ಕ್:
ಸನಾತನ ಧರ್ಮ ಕುರಿತು ಮಾತನಾಡಿ ವಿವಾದಕ್ಕೊಳಗಾಗಿರುವ ಉದಯನಿಧಿ ಸ್ಟಾಲಿನ್ ವಿರುದ್ದ ಟೀಕೆಗಳ ಸುರಿಮಳೆ ಇನ್ನೂ ನಿಂತಿಲ್ಲ. ಕೊಲೆ ಬೆದರಿಕೆಗಳ ಬೆನ್ನಲ್ಲೇ ಉದಯನಿಧಿ ಸ್ಟಾಲಿನ್‌ಗೆ ಚಪ್ಪಲಿಯಿಂದ ಹೊಡೆದರೆ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡುವ ಕುರಿತಾದ ಪೋಸ್ಟರ್‌ಗಳೂ ಇದೀಗ ಹರಿದಾಡುತ್ತಿವೆ.
ಸನಾತನ ಧರ್ಮದ ಬಗ್ಗೆ ಕೊಬ್ಬಿನಿಂದ ಮಾತನಾಡಿದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನನ್‌ಗೆ ಚಪ್ಪಲಿಯಿಂದ ಯಾರು ಹೊಡೆಯುತ್ತಾರೋ ಅವರಿಗೆ ಹತ್ತು ಲಕ್ಷ ರೂಪಾಯಿ ನೀಡುವುದಾಗಿ ಜನ ಜಾಗರಣ ಸಮಿತಿ ಘೋಷಿಸಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ವಿಷಯವಾಗಿ ಪೋಸ್ಟರ್‌ಗಳು ಎಲ್ಲೆಲ್ಲೂ ಕಾಣಿಸುತ್ತಿವೆ.