HEALTH | ಆಗಾಗ ಊಟದಲ್ಲಿ ಪಿಂಕ್‌ ಸಾಲ್ಟ್‌ನ್ನು ಕೂಡ ಬಳಕೆ ಮಾಡಿ, ಯಾಕೆ ಗೊತ್ತಾ?

ಸಾಮಾನ್ಯ ಉಪ್ಪಿನ ಜೊತೆಗೆ ಹೋಲಿಸಿದರೆ ಪಿಂಕ್​ ಉಪ್ಪಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹಾಗೂ ಮೆಗ್ನೀಸಿಯಮ್‌ನಂತಹ 80 ವಿಭಿನ್ನ ಪ್ರಕಾರದ ಖನಿಜಗಳಿವೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ.

ಪಿಂಕ್​ ಉಪ್ಪಿನಲ್ಲಿ ಬಿಳಿ ಉಪ್ಪಿಗಿಂತ ಕಡಿಮೆ ಸೋಡಿಯಂ ಪ್ರಮಾಣವಿದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಹಾಗೂ ಕಡಿಮೆ ಸೋಡಿಯಂ ಸೇವಿಸಲು ಬಯಸುವವರಿಗೆ ಪಿಂಕ್​ ಉಪ್ಪು ಒಳ್ಳೆಯದು. ಈ ಉಪ್ಪು ಸಾಮಾನ್ಯವಾಗಿ ದೇಹ ನಿರ್ಜಲೀಕರಣಗೊಳಿಸಲು ಕಾರಣವಾಗುತ್ತದೆ. ಪಿಂಕ್ ಉಪ್ಪು ದೇಹ ಹೈಡ್ರೀಕರಿಸುತ್ತದೆ, ಜೊತೆಗೆ ಎಲೆಕ್ಟ್ರೋಲೈಟ್ ಮಟ್ಟ ಸಮತೋಲನಗೊಳಿಸಲು ಪೂರಕವಾಗುತ್ತದೆ. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಹಾಗೂ ನಿರ್ವಿಷಗೊಳಿಸಲು ಈ ಉಪ್ಪು ಉತ್ತಮವಾಗಿದೆ. ಇದರಿಂದ ದೇಹವು ಹೊಸ ಚೈತನ್ಯ ಪಡೆಯುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಪಿಂಕ್​ ಉಪ್ಪಿನಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರೋಲೈಟ್‌ಗಳು ಇವೆ. ಇದು ದೇಹದ ಪಿಎಚ್​​ ಮಟ್ಟವನ್ನು ಸಮತೋಲನಗೊಳಿಸಲು ಸಾಧ್ಯವಾಗುತ್ತದೆ. ಇದು ದೇಹವನ್ನು ಸಂಪೂರ್ಣವಾಗಿ ಆರೋಗ್ಯದಿಂದ ಇರಿಸುತ್ತದೆ. ಪಿಂಕ್ ಉಪ್ಪು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ ಹಾಗೂ ವಯಸ್ಸಾಗುವುದನ್ನು ತಡೆಯಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದೇಹದಿಂದ ಕೆಟ್ಟ ವಾಸನೆ ಬರುವುದನ್ನು ಸಹ ತಡೆಯುತ್ತದೆ. ಪಿಂಕ್​ ಉಪ್ಪನ್ನು ನೈಸರ್ಗಿಕ ವಿಧಾನಗಳನ್ನು ಮೂಲಕ ಸಂಸ್ಕರಿಸಲಾಗುತ್ತದೆ. ಆದ್ರೆ, ಸಾಮಾನ್ಯ ಉಪ್ಪನ್ನು ಸಂಪೂರ್ಣವಾಗಿ ಸಂಸ್ಕರಿಸಿ, ಅದನ್ನು ಬಿಳಿಯಾಗಿ ಕಾಣುವಂತೆ ಮಾಡಲು ರಾಸಾಯನಿಕಗಳನ್ನು ಸೇರಿಸಲಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಪಿಂಕ್​ ಉಪ್ಪು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಪೂರಕವಾಗಿದೆ. ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುವಲ್ಲಿ ಇದು ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!