Saturday, December 9, 2023

Latest Posts

BEAUTY TIPS| ಮುಖದ ಕಾಂತಿಗೆ ಶ್ರೀಗಂಧ ಬಳಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಂಧವು ಒಂದು ಸುವಾಸಿತ ಮರ. ಸಸ್ಯಶಾಸ್ತ್ರದ ಪ್ರಕಾರ ಶ್ರೀಗಂಧವು ಸಾಂಟಲಮ್ ವಂಶಕ್ಕೆ ಸೇರಿದ ಒಂದು ಮರ. ಇದರ ತಳಿಗಳು ನೇಪಾಳ, ದಕ್ಷಿಣ ಭಾರತ, ಶ್ರೀಲಂಕಾ, ಹವಾಯ್, ದಕ್ಷಿಣ ಶಾಂತಸಾಗರದ ದ್ವೀಪಗಳು ಮತ್ತು ಆಸ್ಟ್ರೇಲಿಯಗಳಲ್ಲಿ ಕಂಡುಬರುತ್ತವೆ. ಶ್ರೀಗಂಧವನ್ನು ಸುವಾಸನಾ ದ್ರವ್ಯ, ಊದಿನಕಡ್ಡಿಗಳಲ್ಲಿ ಮತ್ತು ಕೆತ್ತನೆಯ ಕೆಲಸಗಳಲ್ಲಿ ಉಪಯೋಗಿಸುವರು.

ಭಾರತದ ಕೆಲ ದೇವಾಲಯಗಳು ಶ್ರೀಗಂಧದ ಮರದಿಂದಲೇ ನಿರ್ಮಿತವಾಗಿದ್ದು ಹಲವು ಶತಮಾನಗಳವರೆಗೆ ಇವು ತಮ್ಮ ಸುವಾಸನೆಯನ್ನು ಉಳಿಸಿಕೊಳ್ಳುವುವು. ಏಷ್ಯಾದಲ್ಲಿ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಶ್ರೀಗಂಧದ ಮರದಿಂದ ನಗಗಳ ಪೆಟ್ಟಿಗೆ ಮತ್ತು ಸೂಕ್ಷ್ಮ ಕುಸುರಿ ಕೆತ್ತನೆಯುಳ್ಳ ಅಲಂಕಾರಿಕ ವಸ್ತುಗಳನ್ನು ನಿರ್ಮಿಸಲಾಗುತ್ತದೆ. ಸಾಮಾನ್ಯವಾಗಿ ಶ್ರೀಗಂಧದ ಮರವು ಕೆಂಪು ಮತ್ತು ಬಿಳಿ ಬಣ್ಣದ ಕಾಂಡಗಳನ್ನು ಹೊಂದಿರುತ್ತದೆ. ಈ ರೀತಿಯ ಅದ್ಭುತ ಗುಣಗಳುಳ್ಳ  ಶ್ರೀಗಂಧ ಚರ್ಮದ ಆರೋಗ್ಯಕ್ಕೂ ಉತ್ತಮವಾದದ್ದು.

ದೇಗುಲಗಳಲ್ಲಿ ದೇವರ ಪೂಜೆಗೆ, ಪ್ರಮುಖ ಧಾರ್ಮಿಕ ಕಾರ್ಯಗಳಲ್ಲೂ ಶ್ರೀಗಂಧದ ಬಳಕೆಯಿದೆ. ಸುಗಂಧ ದ್ರವ್ಯ ತಯಾರಿಯಲ್ಲೂ ಶ್ರೀಗಂಧದ ಪಾತ್ರ ಪ್ರಮುಖವಾದದ್ದು. ದೇಸೀ ಚಿಕಿತ್ಸಾ ಪದ್ದತಿಯಾದ ಆಯುರ್ವೇದದಲ್ಲಿ ಶ್ರೀಗಂಧದ ಬಳಕೆಯಿದೆ.  ಶ್ರೀಗಂಧವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ, ಇದು ಚರ್ಮಕ್ಕೆ ಹಾನಿಯಾಗದಂತೆ ತಡೆಯುತ್ತದೆ, ಇದು ಚರ್ಮದ ಮೇಲೆ ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳನ್ನು ಗುಣಪಡಿಸುತ್ತದೆ.

ಶ್ರೀಗಂಧವು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಚರ್ಮದ ಟೋನ್ ಅನ್ನು ಸರಿದೂಗಿಸಲು ಸಹಾಯ ಮಾಡುವ ವಿಶೇಷ ಗುಣ ಶ್ರೀಗಂಧಕ್ಕಿದೆ.  ಕಲೆಗಳಿರುವ ಸ್ಥಳಗಳಿಗೆ  ಶ್ರೀಗಂಧವನ್ನು  ಹಚ್ಚಿದರೆ ಕಲೆಗಳು ಮಾಯವಾಗುತ್ತವೆ. ಮುಖ ಕಾಂತಿಯುತವಾಗಿ ಕಾಣುತ್ತದೆ. ಶ್ರೀಗಂಧದ ಇನ್ನೊಂದು ಬಹುಮುಖ್ಯ ಅಂಶವೆಂದರೆ ಅದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಮನಸ್ಸನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುವ ಒಂದು ಅದ್ಭುತ ಗುಣ ಶ್ರೀಗಂಧಕ್ಕೆ ಇದೆ. ಮುಖದಲ್ಲಿರುವ ಮೊಡವೆಗಳನ್ನು ಜಿಡ್ಡಿನಂಶವನ್ನು ತೆಗೆದುಹಾಕುವ ಶಕ್ತಿ ಶ್ರೀಗಂಧಕ್ಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!