ರಾಮರಾಜ್ಯ ಕನಸು ನನಸಾಗಬೇಕು: ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು

ಹೊಸದಿಗಂತ ವರದಿ ವಿಜಯಪುರ:

ಒಂದು ಕಾಲದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡುವುದು ಒಂದು ಕನಸು ಆಗಿತ್ತು. ಕೇವಲ ರಾಮಮಂದಿರ ನಿರ್ಮಾಣ ಅಷ್ಟೆ ಆಗಬಾರದು. ಬದಲಿಗೆ ರಾಮರಾಜ್ಯ ಕನಸು ನನಸು ಆಗಬೇಕಿದೆ ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಒಂದು ವರ್ಷದಲ್ಲಿ ರಾಮನ ಬಳಿ ಹೋಗಲು ಸಕಲ ತಯಾರಿಯನ್ನು ಎಲ್ಲರು ನಡೆಸಬೇಕು. ಶ್ರೀರಾಮನ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡೋಣ.‌ ಅಲ್ಲದೇ, ರಾಮಮಂದಿರ ನಿರ್ಮಾಣಕ್ಕೆ ಕಾಲಾವಧಿ ಇದೆ. ಅದಕ್ಕಾಗಿ ರಾಮಾಯಣ ಕುರಿತು ಅಧ್ಯಯನ ಮಾಡಬೇಕು. ಇನ್ನು ಶ್ರೀರಾಮ ಬೇರೆ ಅಲ್ಲ. ಆತನ ಗುಣರಾಶಿಗಳು ಬೇರೆ ಅಲ್ಲ. ದೇವ ಭಕ್ತಿ ಬೇರೆ ಅಲ್ಲ. ದೇಶ ಭಕ್ತಿ ಬೇರೆ ಅಲ್ಲ. ಎರಡು ಒಂದೇ ಆಗಿದೆ‌ ಎಂದರು.

ಕಾಲಕಾಲಕ್ಕೆ ಸಮಾಜವನ್ನು ಸ್ವಚ್ಛಗೊಳೊಸಬೇಕು. ಎಲ್ಲವೂ ಸಮಾಜದಿಂದ ಬಂದಿದೆ. ‌ಹೀಗಾಗಿ ಮಠ, ರಾಜಕೀಯ ಪಕ್ಷಗಳು ಭೇದ ಭಾವ ಮಾಡಬಾರದು. ಸಂಬಂಧಗಳಲ್ಲಿ ದ್ರೋಹ ಬಗೆಯುವ ಕೆಲಸ ಆಗಬಾರದು. ಸಮಾಜದಲ್ಲಿ ದ್ರೋಹ ಆಗಬಾರದು. ನಾವು ಸರಿಯಾಗಿ ಇದ್ದರೆ ಎಲ್ಲವು ಸರಿಯಾಗಿ ಇರುತ್ತದೆ ಎಂದರು.

ಅಲ್ಲದೇ, ಲೈಂಗಿಕ ತಜ್ಞ ವಿಷಯದ ಪಠ್ಯಪುಸ್ತಕದಲ್ಲಿ ವಿಚಾರ ಹಿನ್ನೆಲೆ ಶಿಕ್ಷಣ ಹಾಗೂ ಮನೋತಜ್ಞರು ಇದ್ದಾರೆ. ಅವರು ಸೇರಿಕೊಂಡು ತೀರ್ಮಾನ ಮಾಡಬೇಕು. ಕೇವಲ ಒಬ್ಬರು ಮಾತ್ರ ತೀರ್ಮಾನ ಮಾಡಬಾರದು. ಇದರಿಂದ ಸಮಾಜದಲ್ಲಿ ಗೊಂದಲ ನಿರ್ಮಾಣ ಆಗುತ್ತದೆ.‌
ಹೀಗಾಗಿ ಎಲ್ಲರೂ ಚರ್ಚಿಸಿ ತೀರ್ಮಾನ ಮಾಡಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!