Sunday, January 25, 2026
Sunday, January 25, 2026
spot_img

2028ಕ್ಕೆ ರಾಮರಾಜ್ಯ ಸರ್ಕಾರ ಬರುತ್ತೆ: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭವಿಷ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2028ಕ್ಕೆ ರಾಮರಾಜ್ಯ ರೈತರ ಸರ್ಕಾರ ಬರುತ್ತದೆ ಅದಕ್ಕಾಗಿಯೇ ಭಗವಂತ ಆರನೇ ಬಾರಿ ನನ್ನನ್ನು ಬದುಕಿಸಿದ್ದಾನೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ .

ರಾಮನಗರದಲ್ಲಿ ಮಾತನಾಡಿದ ಅವರು, 2028 ರಲ್ಲಿ ರಾಜ್ಯದಲ್ಲಿ ನಿಜವಾದ ರಾಮರಾಜ್ಯ ಸರ್ಕಾರ ತರಬೇಕು ಅಂತಲೇ ಆ ಭಗವಂತ ನನಗೆ 6ನೇ ಬಾರಿ ಬದುಕುಳಿಸಿದ್ದಾನೆ. ಕಾಂಗ್ರೆಸ್ ಮಹಾನುಭಾವನಿಗೂ ಬುದ್ಧಿ ಹೇಳುತ್ತೇನೆ ಮನೆಹಾಳು ಮಾಡಬೇಡಿ ಎಂದು ಡಿಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಡಿಸಿಎಂ ಡಿಕೆ ಶಿವಕುಮಾರ್ ರೀತಿ ಕಲ್ಲು ಬಂಡೆ ಒಡೆದು ಬಂದಿಲ್ಲ. ನಾನು ಮನಸ್ಸು ಮಾಡಿದರೆ ಅವರಪ್ಪನ ರೀತಿ ಮಾಡುತ್ತಿದ್ದೆ ನಿಮ್ಮ ಒಂದಿಂಚು ಭೂಮಿ ತೆಗೆದುಕೊಳ್ಳಲು ನಾನು ಬಿಡಲ್ಲ ನನಗೆ ಬೇಕಿರುವುದು ಜನಗಳ ಪ್ರೀತಿ ಎಂದು ರಾಮನಗರದಲ್ಲಿ ಹೇಳಿದರು.

Must Read