ಉತ್ತರ ಪ್ರದೇಶ ಬಜೆಟ್ ಅಧಿವೇಶನ ಇಂದಿನಿಂದ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರ ಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು,
ರಾಜ್ಯ ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಫೆಬ್ರವರಿ 22 ರಂದು 2023-24 ರ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ.

ಮೊದಲ ದಿನ ಉಭಯ ಸದನಗಳು – ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರ ಭಾಷಣದೊಂದಿಗೆ ಅಧಿವೇಶನ ಪ್ರಾರಂಭವಾಗುತ್ತದೆ.

ಇದು ಯೋಗಿ ಆದಿತ್ಯನಾಥ್ ಸರ್ಕಾರದ ಎರಡನೇ ಅವಧಿಯ ಎರಡನೇ ಬಜೆಟ್ ಮತ್ತು ಒಟ್ಟಾರೆ ಏಳನೇ ಬಜೆಟ್ ಆಗಿದೆ.

ಜನವರಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬರುವ ರಾಜ್ಯ ಬಜೆಟ್ 25 ಕೋಟಿ ಜನರ ಆಶೋತ್ತರಗಳಿಗೆ ಅನುಗುಣವಾಗಿರುತ್ತದೆ ಮತ್ತು ಲೋಕಲ್ಯಾನ ಸಂಕಲ್ಪ ಪತ್ರದ ನಿರ್ಣಯಗಳನ್ನು ಈಡೇರಿಸಲಾಗುವುದು ಎಂದು ರಾಜ್ಯ ಜನರಿಗೆ ಭರವಸೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!