ಉತ್ತರಾಖಂಡ ದುರಂತ: ಬದುಕುಳಿದ 13 ಮಂದಿ ಇಂದು ರಾತ್ರಿ ಬೆಂಗಳೂರಿಗೆ ವಾಪಸ್

ಹೊಸದಿಗಂತ ಡಿಜಿಟಲ್ ಡೆಸ್ಕ್ :
 
ಉತ್ತರಾಖಂಡ ಸಹಸ್ತ್ರ ತಾಲ್ ಶಿಖರದ ಟ್ರೆಕ್ಕಿಂಗ್‍ನಲ್ಲಿ ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ (Krishna Byre Gowda) ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, ಇಂದು ಸಂಜೆ 5.50 ರ ವಿಮಾನದಲ್ಲಿ ಬದುಕುಳಿದ ಎಲ್ಲಾ 13 ಮಂದಿ ಚಾರಣಿಗರು ಬೆಂಗಳೂರಿಗೆ ಹಿಂದಿರುಗಲು ಟಿಕೆಟ್ ಕಾಯ್ದಿರಿಸಲಾಗಿದೆ ಎಂದಿದ್ದಾರೆ.

ಇನ್ನು ಮೃತ 9 ಜನ ಚಾರಣಿಗರ ದೇಹಗಳನ್ನು ಎಂಬಾಮಿಂಗ್‍ಗಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಬಾಮಿಂಗ್ ನಂತರ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ ದೆಹಲಿ-ಬೆಂಗಳೂರು ವಿಮಾನಗಳಲ್ಲಿ ಮೃತ ದೇಹಗಳನ್ನು ರವಾನಿಸಲು ಸ್ಥಳವನ್ನು ಕಾಯ್ದಿರಿಸಿದ್ದೇವೆ ಎಂದಿದ್ದಾರೆ.

ಈಗಾಗಲೇ ಡೆಹ್ರಾಡೂನ್ ತಲುಪಿರುವ ಬದುಕಿರುವ ಚಾರಣಿಗರು ಇಂದು ರಾತ್ರಿ 8:45 ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಟರ್ಮಿನಲ್ 1 ಗೆ ಸಚಿವ ಕೃಷ್ಣ ಬೈರೇಗೌಡ ಜೊತೆಗೆ 13 ಮಂದಿ ಚಾರಣಿಗರು ಬರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!