ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೆಹ್ರಾಡೂನ್‌ನ ಚಕ್ರತಾದ ಲೋಖಂಡಿ ಗ್ರಾಮದ ಬಳಿಯ ಬುಂದೇಲ್ ರಸ್ತೆಯಲ್ಲಿ ನಾಲ್ವರು ಜನರನ್ನು ಹೊತ್ತೊಯ್ಯುತ್ತಿದ್ದ ಕಾರು ಕಂದಕಕ್ಕೆ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ ಪ್ರಕಾರ, “ಡೆಹ್ರಾಡೂನ್‌ನ ಚಕ್ರತಾದಲ್ಲಿ 4 ಜನರನ್ನು ಹೊತ್ತೊಯ್ಯುತ್ತಿದ್ದ ಕಾರು ಸುಮಾರು 900 ಮೀಟರ್ ಆಳದ ಕಂದಕಕ್ಕೆ ಬಿದ್ದು ಅಪಘಾತಕ್ಕೀಡಾಗಿದೆ” ಎಂದು ತಿಳಿಸಿದೆ. ಘಟನೆಯ ಸುದ್ದಿ ತಿಳಿದ ಕೂಡಲೇ, SDRF ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಎಸ್‌ಡಿಆರ್‌ಎಫ್ ಇಬ್ಬರು ಗಾಯಗೊಂಡವರನ್ನು ರಕ್ಷಿಸಿದ್ದು, ಅಪಘಾತದಲ್ಲಿ ಸಾವನ್ನಪ್ಪಿದ ಇತರ ಇಬ್ಬರು ವ್ಯಕ್ತಿಗಳ ಶವಗಳನ್ನು ಹೊರತೆಗೆದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.