January18, 2026
Sunday, January 18, 2026
spot_img

ಉತ್ತರನ ಪೌರುಷ ಒಲೆಯ ಮುಂದೆ ಮಾತ್ರ.. ಮ್ಯಾಚ್ ಸೋತರು ದುರಹಂಕಾರಕ್ಕೇನು ಕಮ್ಮಿ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡದಿಂದ ಸೋಲುಂಡ ಪಾಕಿಸ್ತಾನ ಆಟಗಾರರು ಪ್ರಶಸ್ತಿ ವಿತರಣೆ ವೇಳೆ ತೀವ್ರ ಮುಜುಗರಕ್ಕೊಳಗಾದರು. ಪಂದ್ಯ ಮುಗಿದ ಸುಮಾರು ಒಂದು ಗಂಟೆಯ ನಂತರ ಆರಂಭವಾದ ಸಮಾರಂಭದಲ್ಲಿ ಮೊದಲು ರನ್ನರ್ ಅಪ್ ಬಹುಮಾನ ವಿತರಣೆ ಮಾಡಲಾಯಿತು.

ವೇದಿಕೆ ಮೇಲೆ ಪಾಕಿಸ್ತಾನ ಆಟಗಾರರು ಬಹುಮಾನ ಸ್ವೀಕರಿಸಲು ಬಂದಾಗ, ಪ್ರೇಕ್ಷಕರು ನಿರಂತರವಾಗಿ “ಮೋದಿ… ಮೋದಿ, ಇಂಡಿಯಾ” ಎಂದು ಘೋಷಣೆ ಕೂಗಿದರು. ಇದರಿಂದ ಪಾಕ್ ಆಟಗಾರರು ಬೇಸರಗೊಂಡರು.

ಈ ವೇಳೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಿಂದ ರನ್ನರ್ ಅಪ್ ಚೆಕ್ ಸ್ವೀಕರಿಸಿದ ತಕ್ಷಣವೇ ವೇದಿಕೆ ಮೇಲೆಯೇ ಎಸೆದರು. ಈ ನಡೆ ಮೈದಾನದಲ್ಲಿದ್ದ ಪ್ರೇಕ್ಷಕರ ಅಚ್ಚರಿಗೆ ಕಾರಣವಾಯಿತು.

ಏಷ್ಯಾಕಪ್ ಫೈನಲ್‌ನಲ್ಲಿ ಸೋಲಿನ ನಿರಾಶೆಯ ಜೊತೆಗೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಪಾಕಿಸ್ತಾನ ತಂಡದ ಅವ್ಯವಸ್ಥಿತ ವರ್ತನೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ನಾಯಕ ಸಲ್ಮಾನ್‌ನ ಚೆಕ್ ಹರಿದು ಎಸೆದ ಘಟನೆ ಈಗ ಕ್ರಿಕೆಟ್ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.

Must Read

error: Content is protected !!