ಶಾಲಾ, ಕಾಲೇಜುಗಳಿಗೆ ರಜೆ: ತವರಿಗೆ ಹೊರಟ ಹಾಸ್ಟೆಲ್ ವಿದ್ಯಾರ್ಥಿಗಳು

ಹೊಸದಿಗಂತ ವರದಿ,ಬಳ್ಳಾರಿ:

ನಗರದ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಹಾಸ್ಟಲ್ ನಲ್ಲಿದ್ದ ವಿದ್ಯಾರ್ಥಿಗಳು ಭಾನುವಾರ ಲಗೇಜ್ ಸಮೇತ ತಮ್ಮ ‌ಗ್ರಾಮಗಳತ್ತ ತೆರಳಿದರು.
ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಜ. 23 ರ ವರೆಗೆ ಶಾಲಾ, ಕಾಲೇಜ್ ಹಾಗೂ ಹಾಸ್ಟಲ್ ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ನಾನಾ ಶಾಲೆ, ಕಾಲೇಜುಗಳ ಹಾಸ್ಟೇಲ್ ಗಳಲ್ಲಿದ್ದ ನೂರಾರು ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಲಗೇಜ್ ಸಮೇತ ತೆರಳಿದರು. ಭಾನುವಾರ ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ನಗರದ ಸಾರಿಗೆ ಬಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ತಮ್ಮ ಊರುಗಳ ಬಸ್ ಗಾಗಿ ಕಾಯುತ್ತಿದ್ದರು.
ನಗರದಲ್ಲಿನ ಆರನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗಿನ ಎಲ್ಲ ಹಾಸ್ಟೆಲ್ ವಿದ್ಯಾರ್ಥಿಗಳು ಬಸ್ ಗಾಗಿ ಪರದಾಡಿದರು.
ಒಂದು ವಾರಕ್ಕೆಲ್ಲ ಲಗೇಜ್ ಯಾಕೆ ತಗೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದರೆ.‌ ಈ ಮಹಾಮಾರಿ ಅರ್ಭಟ ಯಾವಾಗ ಕಡಿಮೆ ಯಾಗುತ್ತೋ, ಗೊತ್ತಿಲ್ಲ, ಅಲ್ಲಿವರೆಗೆ ಯ್ಯಾವ ನಿರ್ಭಂಗಳು ಜಾರಿಗೆ ಬರಲಿವೆ ಗೊತ್ತಿಲ್ಲ, ಅದಕ್ಕೆ ಅಲ್ಲಿವರೆಗೆ ಮನೆಯಲ್ಲೇ ಉಳಿದು ಓದಿಕೊಳ್ಳುತ್ತೇವೆ ಎಂದು ಲಗೇಜ್ ಹೊತ್ತು ಸಾಗುತ್ತಿದ್ದ ವಿದ್ಯಾರ್ಥಿಗಳಿಂದ‌ ಕೇಳಿ ‌ಬಂದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!