ಅಪ್ಪಾಜೀ ಆಂಗ್ಲ ಮಾಧ್ಯಮ ಶಾಲೆಯ 9-10ನೇ ವಿಧ್ಯಾಥಿ೯ಗಳಿಗೆ ಲಸಿಕೆ

ಹೊಸದಿಗಂತ ವರದಿ,ಕಲಬುರಗಿ:

ನಗರದ ಅಪ್ಪಾಜೀ ಗುರುಕುಲ ಆಂಗ್ಲ ಮಾದ್ಯಮ ಶಾಲೆಯಲ್ಲಿ 9ನೇ ಮತ್ತು 10ನೇ ತರಗತಿಯ ವಿಧ್ಯಾಥಿ೯ಗಳಿಗೆ ಕೋವಿಡ ಲಸಿಕೆ ನೀಡಲಾಯಿತು.
ಲಸಿಕೆ ಅಭಿಯಾನದ ಪ್ರಯುಕ್ತ ಶಾಲೆಯ ಸಂಸ್ಥಾಪಕ,ಕಾಯ೯ದಶಿ೯ಯಾದ ರಾಜಕುಮಾರ್ ಉದನೂರ ಮಾತನಾಡಿ, ಕೋವಿಡ 3ನೇ ಅಲೆಯೂ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಅಥೀ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಶಾಲೆಯ 9 ಮತ್ತು 10ನೇ ತರಗತಿ ವಿಧ್ಯಾಥಿ೯ಗಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದರು.
ಆರೋಗ ಅಧಿಕಾರಿ ಗುರುನಾಥ್ , ಆಶಾ ಕಾಯ೯ಕತೆ೯ಯಾದ ಶರಣಮ್ಮಾ, ಶಾಲೆಯ ಆಡಳಿತಾಧಿಕಾರಿ ಗುರು ಸಾಲಿಮಠ, ಶಿಕ್ಷಕರಾದ ಸುವರ್ಣ ಅಂಜಲಿ, ದಿವ್ಯಾ ಹೊನಗುಂಟಿ, ಸುನಂದಾ ಎಸ್, ರೇಣುಕಾ ಎಸ್. ನಂದಿಕೂರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಿವಪುತ್ರ ಮಾಲಿ ಪಾಟೀಲ್ ಉಪಸ್ಥಿತರಿದ್ದರು. ವಿಧ್ಯಾಥಿ೯ಗಳು ಸೇರಿದಂತೆ ಪಾಲಕರಿಗೂ ಸಹ ಇದೇ ಸಂದರ್ಭದಲ್ಲಿ ಲಸಿಕೆ ನೀಡಲಾಯಿತು.
ಸುವರ್ಣ ಅವರು ಲಸಿಕಾ ಕಾಯ೯ಕ್ರಮದ ನಿರೂಪಣೆ ಮಾಡಿದರು.ಗುರು ಸಾಲಿಮಠ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯ ಹೊನಗುಂಟಿ ವಂದನಾರ್ಪಣೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!