SHOCKING VIDEO| ಬೆನ್ನಟ್ಟಿದ ನಾಯಿಗಳಿಂದ ತಪ್ಪಿಸಿಕೊಳ್ಳಲೆತ್ನಿಸಿ ಮಾರಣಾಂತಿಕ ಅಪಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೀದಿ ನಾಯಿಗಳ ದಾಳಿಗಳು ದಿನಕ್ಕೊಂದು ಅವಾಂತರ ಸೃಷ್ಟಿಸುತ್ತಿವೆ. ದೇಶಾದ್ಯಂತ ನಾಯಿಗಳ ದಾಳಿಯ ಘಟನೆಗಳು ಬೆಳಕಿಗೆ ಬರುತ್ತಿವೆ. ಬೀದಿ ನಾಯಿಗಳನ್ನು ಕಂಡರೆ ಜನ ಜೀವ ಭಯದಿಂದ ನಡುಗುವ ಸ್ಥಿತಿ ಎದುರಾಗಿದೆ.

ಇತ್ತೀಚೆಗಷ್ಟೇ ಬೀದಿನಾಯಿಗಳ ಹಾವಳಿಯಿಂದ ವ್ಯಕ್ತಿಯೊಬ್ಬ ಬೈಕ್‌ನಿಂದ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆತ ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ಈ ದುರಂತ ನಡೆದಿದೆ. ಪರೇಶ್ ಜಿಂಗರ್ ವಾಗೋಡಿಯಾ ರಸ್ತೆಯಲ್ಲಿ ವಾಸವಾಗಿದ್ದಾರೆ. ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಬೀದಿನಾಯಿಯೊಂದು ಪರೇಶ್ ಅವರನ್ನು ಬೆನ್ನಟ್ಟಿದೆ. ನಾಯಿ ಎಲ್ಲಿ ತನ್ನ ಮೇಲೆ ದಾಳಿ ಮಾಡುತ್ತದೋ ಎಂದು ಆತಂಕಗೊಂಡು ವೇಗವಾಗಿ ಬರುವ ವೇಳೆ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಕ್ಷಣ ಪರೇಶ್ ಜಿಂಗಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಇದೀಗ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಾಯಿ ಬೆನ್ನಟ್ಟುವುದು, ಪರೇಶ್ ಜಿಂಗ್ ಬೈಕ್ ನಿಂದ ಬಿದ್ದಿರುವುದು… ಇದೆಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!