ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮುಕಾಶ್ಮೀರದಲ್ಲಿನ ವೈಷ್ಣೋದೇವಿ ಮಂದಿರದಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಾಕಷ್ಟು ಸಾವು ನೋವು ಸಂಭವಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ.
ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ತ್ರಿಸದಸ್ಯ ಸಮಿತಿತಯನ್ನು ರಚಿಸಿದ್ದು, ಒಂದು ವಾರದೊಳಗೆ ಪ್ರಕರಣಕ್ಕೆ ಸಂಬಂಧಿಸಿದ ವರದಿ ಸರ್ಕಾರಕ್ಕೆ ಕೊಡುವಂತೆ ಸೂಚನೆ ನೀಡಿದ್ದಾರೆ.
ಈ ಸಮಿತಿಯ ನೃತೃತ್ವವನ್ನು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ದ್ವಿವೇದಿ ವಹಿಸಿಕೊಳ್ಳಲಿದ್ದಾರೆ. ಸಮಿತಿಯಲ್ಲಿ ಜಮ್ಮು ವಿಭಾಗೀಯ ಆಯುಕ್ತ ರಾಘವ್ ಲ್ಯಾಂಗರ್ ಮತ್ತು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಇರಲಿದ್ದಾರೆ.
ಈ ತ್ರಿಸದಸ್ಯ ಸಮಿತಿ ವೈಷ್ಣೊದೇವಿ ಮಂದಿರದಲ್ಲಿ ನಡೆದ ಕಲ್ತುಳಿತಕ್ಕೆ ಕಾರಣವೇನು ಎಂದು ತನಿಖಾ ಮೂಲಕ ತಿಳಿಸಬೇಕಿದೆ.