ವಿಶ್ವಕ್ಕೆ ಪ್ರೇಮಿಗಳ ದಿನ, ಭಾರತೀಯರಿಗೆ ಕರಾಳ ದಿನ: 2019 ಫೆ.14 ರಂದು ನಡೆದಿದ್ದೇನು?

ಶಿವನಗೌಡ ಪಾಟೀಲ ನವಲಹಳ್ಳಿ 
ಫೆಬ್ರವರಿ 14 ಹತ್ತಿರವಾಗುತ್ತಿದ್ದಂತೆ ಒಂದೆಡೆ ಯುವ ಮನಸ್ಸುಗಳಲ್ಲಿ ಪ್ರೀತಿಯ ಚಿಲುಮೆ ಪುಟಿದೇಳುತ್ತಿದೆ. ಆ ದಿನವನ್ನು ತುಂಬಾ ಸ್ಪೇಷಲ್ ಆಗಿ ಆಚರಿಸಬೇಕೆಂಬ ಮಹದಾಸೆ ಹೊತ್ತಿರುವ ಪ್ರೇಮಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಭಾರತೀಯರಿಗೆ ಮಾತ್ರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಧೈರ್ಯಶಾಲಿ ಪುತ್ರರ, ಅದಮ್ಯ ಧೈರ್ಯಶಾಲಿಗಳ , ಶೌರ್ಯಕ್ಕೆ ಹೆಸರಾದ ವೀರ ಪುತ್ರರರು ತಮ್ಮ ಪ್ರಾಣ ತ್ಯಾಗ ಮಾಡಿದ ಯೋಧರ ಬಲಿದಾನದ ದಿನ.
ಈ ದಿನದಂದು ನಡೆದ ಭೀಕರ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಹುತಾತ್ಮರಿಗೆ ನಾನು ನಮಿಸುತ್ತೇನೆ. ಅವರ ಅಸಾಧಾರಣ ಧೈರ್ಯ ಮತ್ತು ಪರಮ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ.ಅಂದಿನ ಭೀಕರ ಘಟನೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಯೋಧರ ತ್ಯಾಗ, ಕುಟುಂಬದ ಕಣ್ಣೀರಿನ ದೃಶ್ಯವನ್ನು ನೆನೆದಾಗ ಹೃದಯ ಭಾರವಾಗುತ್ತದೆ. ನಮಗೇ ಗೊತ್ತಿಲ್ಲದಂತೆ ಕಣ್ಣೀರ ಹನಿ ಕೆನ್ನೆ ಸವರಿ ಜಾರಿರುತ್ತದೆ. ಅಷ್ಟು ಭೀಕರವಾಗಿತ್ತು ಅಂದಿನ ದೃಶ್ಯ. ಅಂದಿನ ಘಟನೆಯನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ. ಹೀಗಾಗಿ, ಭಾರತೀಯರು ಇಂದು ವೀರ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸುವ ದಿನವಾಗಿದೇ.
ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ , ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಹುತಾತ್ಮರಾದರು. ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕಿಂತ ಹೆಚ್ಚು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿಗಳು 78 ವಾಹನಗಳಲ್ಲಿ ಪ್ರಯಾಣಿಸುತಿದ್ದರು. ಸುಮಾರು ಮಧ್ಯಾಹ್ನ 3:15ಕ್ಕೆ ಅವಾಂತಿಪುರ ಬಳಿಯ ಲೆತ್ಪೊರದಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುತಿದ್ದ ಬಸ್ ಗೆ ಸ್ಪೋಟಕಗಳನ್ನು ಹೊಂದಿದ್ದ ಮಾರುತಿ ಇಕೋ ಕಾರೊಂದು ಗುದ್ದಿತು. ಇದರಿಂದ ಬಾಂಬ್ ಸ್ಪೋಟಗೊಂಡು, 76 ಬೆಟಾಲಿಯನ್ ನ 40 ಮೀಸಲು ಪಡೆಯ ಯೋಧರು ಹುತಾತ್ಮರಾದರು ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಇಸ್ಲಾಮ್ ಉಗ್ರಗಾಮಿ ಗುಂಪು ಜೈಷ್–ಎ–ಮೊಹಮದ್ ಹೊತ್ತುಕೊಂಡಿದೆ. ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕನನ್ನು ಆಕ್ರಮಣಕಾರಿ ಎಂದು ಗುರುತಿಸಲಾಗಿತ್ತು.
 ಭಾರತೀಯ ಸೇನೆಯಲ್ಲಿ ಕಳೆದ18 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕದ ಮಂಡ್ಯದ ಗುಡಿಗೆರೆಯ ಯೋಧ ಹೆಚ್ ಗುರು ಈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದಾರೆ ಹಾಗೂ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಕಾಶಿರಾಯ ಶಂಕರೆಪ್ಪ ಬೊಮ್ಮನಹಳ್ಳಿ (44) ಅವರು ವೀರಮರಣ ಹೊಂದಿದ್ದಾರೆ.ಪುಲ್ವಾಮಾದಲ್ಲಿ ಶುಕ್ರವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಉಗ್ರರೊಂದಿಗೆ ನಡೆದ ಗುಂಡಿನ ಕಾದಾಟದಲ್ಲಿ ಯೋಧ ಕಾಶಿರಾಯ ಅವರು ಹೋರಾಡುತ್ತಲೇ ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಕಾಶಿರಾಯ ಅವರು 44 ಆರ್‌ಆರ್‌ (ರಜಪೂತ್‌- ಪೆರೆಂಟ್‌ ಯುನಿಟ್‌- 38 ಅಸಾಲ್ಟ್‌ ಎಂಜಿನಿಯರ್‌ ರೆಜಿಮೆಂಟ್‌)ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಜಿಲ್ಲೆಯ ರಾಜಪೊರಾ ಸಮೀಪದ ಹಂಜಿನಿ ಹಳ್ಳಿಯಲ್ಲಿ ಕಾರ್ಯಾಚರಣೆಯಲ್ಲಿ ನಡೆಸಿದ್ದವು.
ಉಗ್ರರ ಅಡಗು ತಾಣವನ್ನು ಸುತ್ತುವರಿದಿದ್ದ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿಗರೆದಿದ್ದಾರೆ. ಆಗ ಯೋಧರು ಕೂಡ ಪ್ರತ್ಯುತ್ತರ ನೀಡಿದ್ದಾರೆ. ಈ ಘರ್ಷಣೆಯಲ್ಲಿ ಯೋಧ ಕಾಶಿರಾಯ ಅವರು ತೀವ್ರವಾಗಿ ಗಾಯಗೊಂಡು ಯೋಧ ವೀರ ಮರಣಹೊಂದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 3 ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿವೆ.ಇವರು 2005ರಲ್ಲಿ ಸೇರಿದ್ದ ಕಾಶಿರಾಯ ಅವರು ಕಾಶ್ಮೀರ, ಪಂಜಾಬ್‌ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಬೊಮ್ಮನಹಳ್ಳಿ ಮನೆತನದಲ್ಲಿ ಇವನೊಬ್ಬ ನೌಕರಿಗೆ ಸೇರಿದ್ದು, ನಮ್ಮೆಲ್ಲರಿಗೂ ಹೆಮ್ಮೆಯಾಗಿತ್ತು. ಜು.7 ರಂದು ಗ್ರಾಮಕ್ಕೆ ಒಂದು ತಿಂಗಳ ಕಾಲ ರಜೆ ಮೇರೆಗೆ ಬರುವವನಿದ್ದ. ಭಯೋತ್ಪಾದನಾ ದಾಳಿಯಲ್ಲಿ ವೀರ ಮರಣ ವನ್ನು ಸಹಿಸಿಕೊಳ್ಳಲು ಆದಷ್ಟು ಕಷ್ಟ ಮತ್ತು ದುಃಖಕರ ಸಂಗತಿಯಾಗಿತ್ತು..
ಈ ಭೀಕರ ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತವು ಫೆಬ್ರವರಿ 26 ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಬಾಲಾಕೋಟ್ ಪ್ರದೇಶದಲ್ಲಿದ್ದ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಪರಿಣಾಮ ಅಪಾರ ಸಂಖ್ಯೆಯಲ್ಲಿ ಜೈಶ್ ಜೈಷ್-ಎ-ಮೊಹಮ್ಮದ್ ಸಂಘಟನೆಯ 300ಕ್ಕೂ ಹೆಚ್ಚು ಉಗ್ರಗಾಮಿಗಳು ಸತ್ತಿದ್ದಾರೆ. ಭಾರತ ಪ್ರತೀಕಾರವನ್ನು ತೀರಿಸಿಕೊಂಡಿತು ಆದರೆ ವೀರಮರಣವನ್ನಪ್ಪಿದ ಯೋಧರ ಸಾವು ಇನ್ನೂ ಕಣ್ಣಮುಂದೆ ಹಾಗೆ ಇದೆ. ಇಂತಹ ಘಟನೆಗಳು ನಡೆಯದಂತೆ ಸರ್ಕಾರ ವಿಶೇಷವಾದ ಗಮನವನ್ನು ಹರಿಸಿ ದೇಶದ ಒಳಗಿರುವ ಮತ್ತು ಹೊರಗಿರುವ ದೇಶ ದ್ರೋಹಿಗಳು ಮತ್ತು ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಿ ಕೊಳ್ಳುವುದು ಅವಶ್ಯವಾಗಿದೆ. ಇಂತಹ ದಿನಗಳು ದಿನಗಳು ನೆನಪಾದಾಗ ಮತ್ತೆ ಮತ್ತೆ ಭಾರತೀಯ ಸೇನೆಯ ಮತ್ತು ಭಾರತೀಯ ಯೋಧರ ಧೈರ್ಯ ಸಾಹಸದ ರೀತಿಯಲ್ಲಿ ನಮಗೆ ಕಂಡುಬರುತ್ತದೆ ಇದು ಭಾರತದ ರಾಷ್ಟ್ರೀಯತೆಯನ್ನು ಭಾರತ ದೇಶದ ಆಂತರಿಕ ಶಕ್ತಿಯನ್ನು ತೋರಿಸಿಕೊಡುತ್ತದೆ.
ರಾಜಕಾರಣಿಗಳನ್ನು ಸಿನಿಮಾ ನಟರನ್ನು ಮತ್ತು ಇತರ ವ್ಯಕ್ತಿಗಳನ್ನು ಮಾದರಿಯಾಗಿ ತೆಗೆದುಕೊಳ್ಳುವ ಯುವಜನತೆ ಇಂದು ದೇಶಕ್ಕಾಗಿ ತಮ್ಮ ಕುಟುಂಬವನ್ನು, ಮತ್ತು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನಮ್ಮಗಳ ರಕ್ಷಣೆಗಾಗಿ ತಾವು ಕಟ್ಟಿ ಬದ್ಧರಾಗಿರುವಂತೆ ದೇಶದ ಸೈನಿಕರ ಬಗ್ಗೆ ನಾವೆಲ್ಲರೂ ಮಾದರಿಯ ಸ್ವರೂಪವನ್ನು ಪಡೆದುಕೊಳ್ಳಬೇಕು ಅವರನ್ನೇ ಹೀರೋಗಳಾಗಿ ನಾವು ಪೂಜಿಸಬೇಕು.ಅಂದಾಗ ಮಾತ್ರ ಒಂದು ದೇಶದ ಆಂತರಿಕ ಭದ್ರತೆ ಮತ್ತು ಭದ್ರತೆ ಮತ್ತು ರಾಷ್ಟ್ರೀಯತೆ ಮತ್ತು ದೇಶದ ಬೆಳವಣಿಗೆಗೆ ಯುವಜನತೆ ಯಾವಾಗ ರೀತಿಯ ವಾತಾವರಣ ಸೃಷ್ಟಿಯಾಗಲು ಸಾಧ್ಯವಾಗುತ್ತದೆ.
 ರಾಷ್ಟ್ರಪ್ರೇಮ ಕುಂದುತ್ತಿರುವ ಇವತ್ತಿನ ದಿನಮಾನದಲ್ಲಿ ರಾಷ್ಟ್ರೀಯತೆ ಪ್ರಥಮ ಆದ್ಯತೆಯಾಗುವ, ಪ್ರೇರಣೆಯಾಗುವ, ಯುವ ಜನತೆಗೆ ಮತ್ತು ನಾಗರಿಕರಿಗೆ ಇಂಥ ದಿನಾಚರಣೆಗಳ ಮೂಲಕ ಮಹತ್ವವನ್ನು ತಿಳಿಸಬೇಕಾಗಿದೆ. ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡ, ತಮ್ಮ ಕುಟುಂಬವನ್ನು ನೋಡದೆ ದೇಶವೇ ಒಂದು ಕುಟುಂಬವನ್ನ ಮಾಡಿಕೊಂಡು ದೇಶ ಸೇವೆ ಮಾಡಿದ ಯೋಧರನ್ನ ಸ್ಮರಿಸುವುದರ ಮೂಲಕ ದೇಶಪ್ರೇಮಾವನ ನಡೆಯೋಣ.
ಶಿವನಗೌಡ ಪೊಲೀಸ್ ಪಾಟೀಲ ನವಲಹಳ್ಳಿ 
ಉಪನ್ಯಾಸಕರು ಕೊಪ್ಪಳ
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!